ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭಪಾತಕ್ಕೆ ಇತರ ದೇಶಗಳ ಅಸ್ತು: ಗೊಂದಲದಲ್ಲಿ ಅಮೆರಿಕ

Last Updated 4 ಮೇ 2022, 15:21 IST
ಅಕ್ಷರ ಗಾತ್ರ

ಬೊಗೊಟ, ಕೊಲಂಬಿಯಾ: ಅಮೆರಿಕಾದ ಮಹಿಳೆಯರು ಗರ್ಭಪಾತದ ಸಾಂವಿಧಾನಿಕ ಹಕ್ಕನ್ನು ಕಳೆದುಕೊಳ್ಳುತ್ತಿದ್ದಾರೆ. ಆದರೆ ಪ್ರಪಂಚದ ಇತರೆ ನ್ಯಾಯಾಲಯಗಳು ಇದಕ್ಕೆ ವಿರುದ್ಧ ತೀರ್ಪು ನೀಡುತ್ತಿದ್ದು, ಗರ್ಭಪಾತಕ್ಕೆ ಅವಕಾಶ ನೀಡತೊಡಗಿವೆ. ಇದರಿಂದ ಅಮೆರಿಕದ ಹಲವು ರಾಜ್ಯಗಳಲ್ಲಿ ಗೊಂದಲ ನಿರ್ಮಾಣವಾಗಿದೆ.

ಇತ್ತೀಚಿಗೆ ಕೊಲಂಬಿಯಾದ ಸಾಂವಿಧಾನಿಕ ನ್ಯಾಯಾಲಯ, ಮಹಿಳೆಯರು ಗರ್ಭ ಧರಿಸಿದ 24 ವಾರಗಳ ನಂತರವೂ ಗರ್ಭಪಾತ ಮಾಡಿಸಿಕೊಳ್ಳುವುದನ್ನು ಕಾನೂನುಬದ್ಧಗೊಳಿಸಿದೆ. ಏಕೆಂದರೆ ಈ ಪದ್ಧತಿಯನ್ನು ದೇಶದಲ್ಲಿ ಅನುಸರಿಸುತ್ತ ಬರಲಾಗಿದ್ದು, ಅದನ್ನೇ ನ್ಯಾಯಾಲಯವೂ ಎತ್ತಿ ಹಿಡಿದಿದೆ.

ಅಮೆರಿಕಾದ ಮಹಿಳಾ ಕಾರ್ಯಕರ್ತೆಯರು ಗರ್ಭಪಾತದ ಮುಕ್ತ ಅವಕಾಶ ಕೋರಿಹಲವು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಈಗ ಅಲ್ಲಿನ ಸುಪ್ರೀಂ ಕೋರ್ಟ್‌ 1973 ರೋಯ್‌ ವಿ. ವೇಡ್‌ ಅವರ ನಿರ್ಧಾರವನ್ನು ರದ್ದುಗೊಳಿಸಲಿದೆ ಎಂಬ ಸುದ್ದಿಯು ಮಹಿಳೆಯರಲ್ಲಿ ಬೇಸರ ತರಿಸಿದೆ.

ಮೆಕ್ಸಿಕೊ, ಅರ್ಜೆಂಟೀನಾ,ಕ್ಯೂಬಾ ಮತ್ತು ಉರುಗ್ವೆಗಳಲ್ಲಿ ಸಹ ಗರ್ಭಪಾತವನ್ನು ಕಾನೂನುಬದ್ಧಗೊಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT