ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಟ್ರಾಜೆನಿಕಾ ಲಸಿಕೆ ಶೇ 79ರಷ್ಟು ಪರಿಣಾಮಕಾರಿ

ಅಮೆರಿಕದ ಅಧ್ಯಯನ ವರದಿ
Last Updated 22 ಮಾರ್ಚ್ 2021, 9:47 IST
ಅಕ್ಷರ ಗಾತ್ರ

ಲಂಡನ್: 'ಕೋವಿಡ್‌ 19' ಲಸಿಕೆ ಕುರಿತು ಅಮೆರಿಕ ನಡೆಸಿರುವ ಅಧ್ಯಯನದಲ್ಲಿ ದೊರೆತ ದತ್ತಾಂಶಗಳ ಪ್ರಕಾರ ಅಸ್ಟ್ರಾಜೆನಿಕಾ ಕೋವಿಡ್‌ ಲಸಿಕೆ ಶೇ 79ರಷ್ಟು ಪರಿಣಾಮಕಾರಿಯಾಗಿದೆ.

ಸುಮಾರು 30 ಸಾವಿರ ಸ್ವಯಂ ಸೇವಕರನ್ನು ಈ ಅಧ್ಯಯನಕ್ಕೆ ಒಳಪಡಿಸಲಾಗಿದ್ದು, ಅದರಲ್ಲಿ 20 ಸಾವಿರ ಮಂದಿಗೆ ಲಸಿಕೆ ನೀಡಿ, ಉಳಿದವರಿಗೆ ಡಮ್ಮಿ ಲಸಿಕೆ ನೀಡಲಾಗಿತ್ತು. ಈ ಅಧ್ಯಯನದ ಫಲಿತಾಂಶವನ್ನು ಸೋಮವಾರ ಪ್ರಕಟಿಸಲಾಗಿದೆ.

ಆಸ್ಟ್ರಾಜೆನಿಕಾ ಲಸಿಕೆ ಕುರಿತು ಆರಂಭದಲ್ಲಿ ಅಮೆರಿಕ ನಡೆಸಿದ ಅಧ್ಯಯನದ ಅಂಶಗಳನ್ನು ಆಹಾರ ಮತ್ತು ಔಷಧ ಆಡಳಿತಕ್ಕೆ(ಎಫ್‌ಡಿಎ) ಸಲ್ಲಿಸಬೇಕಾಗಿದೆ. ಇಲಾಖೆಯು, ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಲು ನಿರ್ಧರಿಸುವ ಮುನ್ನ, ಎಫ್‌ಡಿಎ ಸಲಹಾ ಸಮಿತಿ ನೀಡಿರುವ ಲಸಿಕೆ ಹಿಂದಿನ ಸಾಕ್ಷ್ಯಗಳನ್ನು ಸಾರ್ವಜನಿಕವಾಗಿ ಚರ್ಚೆಗೆ ಒಳಪಡಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT