ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಗನಯಾನಿ ಜೇಮ್ಸ್‌ ಮೆಕ್‌ಡಿವಿಟ್‌ ನಿಧನ

Last Updated 18 ಅಕ್ಟೋಬರ್ 2022, 11:24 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದ ಗಗನಯಾನಿ ಹಾಗೂ ಚಂದ್ರನ ಮೇಲೆ ಕಾಲಿಡುವುದಕ್ಕೆ ಮೊದಲಾಗಿ ಪರೀಕ್ಷೆಗೆ ಒಳಪಡಿಸಿದ ಅಪೊಲೊ 9 ಗಗನನೌಕೆಯ ಕಮಾಂಡರ್‌ ಆಗಿದ್ದ ಜೇಮ್ಸ್‌ ಎ.ಮೆಕ್‌ಡಿವಿಟ್‌ (93) ಅರಿಜೋನಾದ ಟುಕ್ಸನ್‌ನಲ್ಲಿ ನಿಧನರಾಗಿದ್ದಾರೆ ಎಂದು ‘ನಾಸಾ’ ತಿಳಿಸಿದೆ.

ಮೆಕ್‌ಡಿವಿಟ್‌ ಅವರು 1965ರ ಜಿಮಿನಿ 4 ವ್ಯೋಮನೌಕೆಯ ಕಮಾಂಡರ್ ಸಹ ಆಗಿದ್ದರು. ಆಗ ಅವರ ಜತೆಗಾr ಎಡ್‌ ವೈಟ್‌ ಅವರು ಮೊದಲ ಬಾರಿಗೆ ಬಾಹ್ಯಾಕಾಶ ನಡಿಗೆ ಮಾಡಿದ್ದರು. ಈ ದೃಶ್ಯವನ್ನು ಮೆಕ್‌ಡಿವಿಟ್‌ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದರು. ಅಮೆರಿಕದ ವ್ಯೋಮಯಾನಿ ನಡೆಸಿದ ಪ್ರಪ್ರಥಮ ಬಾಹ್ಯಾಕಾಶ ನಡಿಗೆಯ ಚಿತ್ರ ಒಂದು ಐತಿಹಾಸಿಕ ಚಿತ್ರವಾಗಿ ಇತಿಹಾಸದಲ್ಲಿ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT