ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರಾನ್: ಹಿಂಸಾಚಾರದಲ್ಲಿ 28ಕ್ಕೂ ಹೆಚ್ಚು ಮಕ್ಕಳ ಹತ್ಯೆ

ಮಾನವ ಹಕ್ಕುಗಳ ಪರ ಸಂಘಟನೆಗಳಿಂದ ಮಾಹಿತಿ
Last Updated 12 ಅಕ್ಟೋಬರ್ 2022, 13:42 IST
ಅಕ್ಷರ ಗಾತ್ರ

ನಿಕೊಸಿಯ: ಧಾರ್ಮಿಕ ವಸ್ತ್ರಸಂಹಿತೆಯ ಕಟ್ಟುಪಾಡು ವಿರೋಧಿಸಿ ಇರಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಸುಮಾರು 28 ಮಕ್ಕಳು ಹತ್ಯೆಯಾಗಿದ್ದಾರೆ. ನೂರಕ್ಕೂ ಹೆಚ್ಚು ಮಕ್ಕಳು ವಯಸ್ಕರ ಕಾರಾಗೃಹಗಳಲ್ಲಿ ಬಂಧನಕ್ಕೀಡಾಗಿದ್ದಾರೆ ಎಂದು ಮಾನವ ಹಕ್ಕುಗಳ ಪರ ಸಂಘಟನೆಗಳು ತಿಳಿಸಿವೆ.

ಅಂಕಿ ಅಂಶಗಳ ಪ್ರಕಾರ, ಸಂಘರ್ಷದಲ್ಲಿ 28 ಮಕ್ಕಳು ಹತ್ಯೆಯಾಗಿದ್ದಾರೆ. ಇವರಲ್ಲಿ ಹೆಚ್ಚು ಮಕ್ಕಳು ಸೌಲಭ್ಯವಂಚಿತ ಸಿಸ್ಟಾನ್‌– ಬಲೂಚಿಸ್ತಾನ ಪ್ರಾಂತ್ಯಗಳಿಗೆ ಸೇರಿರುವವರು ಎಂದು ಟೆಹ್ರಾನ್‌ ಮೂಲದ ಸಂಸ್ಥೆಯೊಂದು ತಿಳಿಸಿದೆ.

ಶಾಲೆಗಳು ಮತ್ತು ರಸ್ತೆಗಳಲ್ಲಿ ವಸ್ತ್ರಸಂಹಿತೆ ವಿರೋಧಿಸಿ ಹೋರಾಡುತ್ತಿರುವ ಮಕ್ಕಳ ಮೇಲೆ ಭದ್ರತಾ ಪಡೆಗಳು ಹಿಂಸಾಚಾರ ನಡೆಸಿರುವುದನ್ನು ಇರಾನ್‌ನ ಮಕ್ಕಳ ಹಕ್ಕುಗಳ ರಕ್ಷಣಾ ಸಂಸ್ಥೆ ವಿರೋಧಿಸಿದೆ.ಮಕ್ಕಳ ಕುರಿತ ಮಾಹಿತಿಯನ್ನು ಅವರ ಕುಟುಂಬಗಳಿಗೆ ನೀಡಲಾಗುತ್ತಿಲ್ಲ. ವಕೀಲರು, ಮಕ್ಕಳ ನ್ಯಾಯಾಧೀಶರು ಮತ್ತು ಪೊಲೀಸರ ಅನುಪಸ್ಥಿತಿಯಲ್ಲಿ ಮೊಕದ್ದಮೆಗಳು ನಡೆಯುತ್ತಿವೆ. ಇದಕ್ಕೆ ಸರ್ಕಾರವನ್ನೇ ಹೊಣೆಯಾಗಿಸಬೇಕು. ಮಕ್ಕಳ ವಿರುದ್ಧದ ದೌರ್ಜನ್ಯಕ್ಕೆ ಮತ್ತು ಅವರ ಸಾವಿಗೆ ಕಾರಣರಾದವರನ್ನು ಶಿಕ್ಷಿಸಬೇಕು ಎಂದು ಸಂಸ್ಥೆ ಹೇಳಿದೆ.

ಮಾದಕ ವಸ್ತುವಿಗೆ ಸಂಬಂಧಿಸಿದ ಅಪರಾಧಗಳಲ್ಲಿ ಬಂಧನಕ್ಕೊಳಗಾಗಿರುವ ವಯಸ್ಕರ ಜೊತೆ ಕೆಲ ಬಂಧಿತ ಮಕ್ಕಳನ್ನು ಇರಿಸಲಾಗಿದೆ. 18 ವರ್ಷ ವಯಸ್ಸಿನ ಕೆಳಗಿರುವವರನ್ನು 18 ವರ್ಷ ಮೇಲ್ಪಟ್ಟ ಅಪರಾಧಿಗಳ ಜೊತೆ ಇರಿಸಬಾರದು ಎಂದು ಮಾನವ ಹಕ್ಕುಗಳ ಪರ ವಕೀಲ ಹಸನ್‌ ರೈಸಿ ಹೇಳಿದ್ದಾರೆ.12–13 ಮತ್ತು 18–19 ವರ್ಷ ವಯಸ್ಸಿನ ಸುಮಾರು 300 ಜನರು ಪೊಲೀಸ್ ವಶದಲ್ಲಿ ಇದ್ದಾರೆ ಎಂದಿದ್ದಾರೆ.

ವಶಕ್ಕೆ ಪಡೆದಿರುವ ಪ್ರತಿಭಟನಕಾರರ ಸರಾಸರಿ ವಯಸ್ಸು 15 ವರ್ಷ ಎಂದು ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್‌ನ ಉಪ ಕಮಾಂಡರ್‌ ಆಲಿ ಫದಾವಿ ಈ ಮೊದಲು ತಿಳಿಸಿದ್ದರು.

ಇಸ್ಲಾಂ ವಸ್ತ್ರಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದ ಮಾಶಾ ಅಮೀನಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಬೆನ್ನಲ್ಲೇ ಸೆಪ್ಟೆಂಬರ್‌ 17ರಿಂದ ಇರಾನ್‌ನಾದ್ಯಂತ ಪ್ರತಿಭಟನೆ ಭುಗಿಲೆದ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT