ಶನಿವಾರ, ಮಾರ್ಚ್ 25, 2023
29 °C

ಹೂಸ್ಟನ್‌: ಸಂಗೀತ ಉತ್ಸವದಲ್ಲಿ ನೂಕು ನುಗ್ಗಲು, ಕನಿಷ್ಠ 8 ಜನರ ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

ಹೂಸ್ಟನ್‌: ಶುಕ್ರವಾರ ನಡೆದ ಆಸ್ಟ್ರೋವರ್ಲ್ಡ್ ಸಂಗೀತ ಉತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಭವಿಸಿದ ನೂಕು ನುಗ್ಗಲು ಮತ್ತು ಕಾಲ್ತುಳಿತದಲ್ಲಿ ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೂಸ್ಟನ್ ಅಗ್ನಿಶಾಮಕ ದಳದ ಮುಖ್ಯಸ್ಥ ಸ್ಯಾಮ್ಯುಯೆಲ್ ಪೆನಾ ಅವರು ಎನ್‌ಆರ್‌ಜಿ ಪಾರ್ಕ್‌ನ ಹೊರಗೆ ಮುಂಜಾನೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಘಟನೆಯ ಅಂಕಿಅಂಶಗಳನ್ನು ದೃಢಪಡಿಸಿದರು.

ರಾತ್ರಿ 9 ಅಥವಾ 9:15 ರ ಸುಮಾರಿಗೆ ಪ್ರೇಕ್ಷಕರು ವೇದಿಕೆಯ ಮುಂಭಾಗದ ಕಡೆಗೆ ಹೋಗಲು ಪ್ರಾರಂಭಿಸಿದಾಗ ನೂಕು ನುಗ್ಗಲಿನಿಂದ ಕಾಲ್ತುಳಿತ ಸಂಭವಿಸಿದೆ ಎಂದು ಸಿಬಿಎಸ್ ನ್ಯೂಸ್-ಅಂಗಸಂಸ್ಥೆ ಕೆಎಚ್‌ಒಯು 11 ನ್ಯೂಸ್ ತಿಳಿಸಿದೆ.

ಅಗ್ನಿಶಾಮಕ ದಳವು 17 ಜನರನ್ನು ಆಸ್ಪತ್ರೆಗಳಿಗೆ ದಾಖಲಿಸಿದೆ. ಅದರಲ್ಲಿ 11 ಜನರಿಗೆ ಹೃದಯ ಸ್ತಂಭನವಾಗಿತ್ತು ಎಂದು ಸುದ್ದಿ ವಾಹಿನಿ ಹೇಳಿದೆ.

ರ್‍ಯಾಪರ್ ಟ್ರಾವಿಸ್ ಸ್ಕಾಟ್ ಅವರ ಸೆಟ್‌ನಲ್ಲಿ ಜನಸಂದಣಿ ಹೆಚ್ಚಾದಾಗ ಕಾಲ್ತುಳಿತ ಸಂಭವಿಸಿದೆ ಎಂದು ಹೂಸ್ಟನ್ ಕ್ರಾನಿಕಲ್ ಹೇಳಿದೆ.

ಎರಡು ದಿನಗಳ ಈ ಸಂಗೀತ ಉತ್ಸವಕ್ಕೆ 50,000 ಜನರು ಆಗಮಿಸಿದ್ದರು ಎಂದು ಪತ್ರಿಕೆ ತಿಳಿಸಿದೆ. ಕಾಲ್ತುಳಿತದ ಬಳಿಕ ಎರಡನೇ ದಿನದ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು