ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ವ ಅಫ್ಗಾನಿಸ್ತಾನದಲ್ಲಿ ತಾಲಿಬಾನಿಗಳ ಮೇಲೆ ದಾಳಿ: 5 ಮಂದಿ ಸಾವು

Last Updated 22 ಸೆಪ್ಟೆಂಬರ್ 2021, 11:20 IST
ಅಕ್ಷರ ಗಾತ್ರ

ಕಾಬೂಲ್: ಪೂರ್ವ ಅಫ್ಗಾನಿಸ್ತಾನದಲ್ಲಿ ಬುಧವಾರ ತಾಲಿಬಾನ್ ವಾಹನಗಳ ಮೇಲೆ ನಡೆದ ದಾಳಿಗಳಲ್ಲಿ ಇಬ್ಬರು ದಾಳಿಕೋರರು ಹಾಗೂ ಮೂವರು ನಾಗರಿಕರು ಸಾವಿಗೀಡಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಆಗಸ್ಟ್‌ ಮಧ್ಯದಲ್ಲಿ ಅಫ್ಗಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ ಆಗಾಗ ದಾಳಿಕೋರರು ದಾಳಿ ನಡೆಸುತ್ತಿದ್ದಾರೆ.

ಜಲಾಲಬಾದ್‌ನ ಗ್ಯಾಸ್ ಸ್ಟೇಷನ್‌ವೊಂದರಲ್ಲಿ ಬುಧವಾರ ಬಂದೂಕುಧಾರಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ದಾಳಿಯಲ್ಲಿ ಇಬ್ಬರು ದಾಳಿಕೋರರು ಸೇರಿದಂತೆ ಗ್ಯಾಸ್ ಸ್ಟೇಷನ್‌ನ ಸಿಬ್ಬಂದಿ ಹಾಗೂ ಮಗುವೊಂದು ಸಾವಿಗೀಡಾಗಿದೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಪ್ರತ್ಯೇಕ ದಾಳಿಯೊಂದರಲ್ಲಿ ಮತ್ತೊಂದು ಮಗುವೊಂದು ಸಾವಿಗೀಡಾಗಿದ್ದು, ಇಬ್ಬರು ತಾಲಿಬಾನಿಗಳು ಗಾಯಗೊಂಡಿದ್ದಾರೆ. ಜಲಾಲಬಾದ್ ಬಳಿ ತಾಲಿಬಾನ್ ವಾಹನವೊಂದರ ಮೇಲೆ ನಡೆದ ಬಾಂಬ್ ದಾಳಿಯೊಂದರಲ್ಲಿ ಒಬ್ಬರು ಗಾಯಗೊಂಡಿದ್ದಾರೆ.

ಬುಧವಾರ ನಡೆದ ದಾಳಿಯ ಹೊಣೆಯನ್ನು ಯಾವ ಸಂಘಟನೆಯೂ ಒಪ್ಪಿಕೊಂಡಿಲ್ಲ. ಈ ಹಿಂದೆ ಜಲಾಲಬಾದ್‌ನಲ್ಲಿ ನಡೆದ ದಾಳಿಯಲ್ಲಿ 8 ಮಂದಿ ಮೃತಪಟ್ಟಿದ್ದು, ಈ ದಾಳಿಯ ಹೊಣೆಯನ್ನು ಐಎಸ್ ಸಂಘಟನೆಯು ಒಪ್ಪಿಕೊಂಡಿತ್ತು. ತಾಲಿಬಾನ್ ಆಡಳಿತಗಾರರು ಮತ್ತು ಐಎಸ್ ಸಂಘಟನೆಗಳ ನಡುವಿನ ದ್ವೇಷದ ಕಾರಣದಿಂದ ಮತ್ತಷ್ಟು ಸಂಘರ್ಷದ ಭೀತಿ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT