ಮಂಗಳವಾರ, ಜನವರಿ 26, 2021
16 °C

ಎರಡು ಗ್ರಾಮಗಳ ಮೇಲೆ ಉಗ್ರಗಾಮಿಗಳ ದಾಳಿ ಕನಿಷ್ಠ 100 ಮಂದಿ ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನಿಯಾಮೆ: ‘ಇಸ್ಲಾಮಿಕ್ ಉಗ್ರಗಾಮಿಗಳು ಮಾಲಿಗೆ ಹೊಂದಿಕೊಂಡಿರುವ ಗಡಿಯಲ್ಲಿ ನೈಜೆರ್ ಸಮೀಪ ಎರಡು ಗ್ರಾಮಗಳ ಮೇಲೆ ದಾಳಿ ನಡೆಸಿದ್ದು, ಕನಿಷ್ಠ 100 ಜನರು ಮೃತಪಟ್ಟಿದ್ದಾರೆ’ ಎಂದು ನೈಜೀರಿಯಾದ ಪ್ರಧಾನಿ ತಿಳಿಸಿದ್ದಾರೆ.

‘ಎರಡೂ ಗ್ರಾಮಗಳಿಗೆ ಭೇಟಿ ನೀಡಿದ್ದ ಪ್ರಧಾನಿ ಬ್ರಿಗಿ ರಫಿನಿ ಅವರು, ‘ಭಾನುವಾರ ಈ ದಾಳಿ ನಡೆದಿದೆ. ಮೃತರಿಗೆ ಸಂತಾಪ ಸೂಚಿಸಲು, ಗ್ರಾಮಸ್ಥರಿಗೆ ನೈತಿಕ ಸ್ಥೈರ್ಯ ತುಂಬುವ ಉದ್ದೇಶದಿಂದ ತಾವು ಭೇಟಿ ನೀಡಿದ್ದಾಗಿ’ ತಿಳಿಸಿದರು.

‘ಗಡಿ ಭಾಗದ ಟಿಲ್ಲಾಬೆರಿ ವಲಯದಲ್ಲಿನ ಗ್ರಾಮಗಳ ನಿವಾಸಿಗಳು ಅಭದ್ರ ಸ್ಥಿತಿಯಲ್ಲಿದ್ದಾರೆ. ಸ್ಥಳೀಯರು ಇಬ್ಬರು ಸಹಚರರನ್ನು ಕೊಂದರು ಎಂದು ರೋಷಗೊಂಡು ಈ ಕೃತ್ಯ ಎಸಗಿದ್ದಾರೆ. ಪಶ್ಚಿಮ ಆಫ್ರಿಕಾ ಚುನಾವಣಾ ಆಯೋಗ ಅಧ್ಯಕ್ಷೀಯ ಚುನಾವಣೆಯ ಎರಡನೇ ಸುತ್ತಿನ ಪ್ರಕ್ರಿಯೆ ಆರಂಭವಾಗಲಿದೆ ಎಂದು ಘೋಷಿಸಿದ ಹಿಂದೆಯೇ ಈ ದಾಳಿ ನಡೆದಿದೆ’‌ ಎಂದು ತಿಳಿಸಿದರು.

ನೈಜೆರ್‌ ವಲಯದಲ್ಲಿ ಹಲವು ಬಾರಿ ಇಸ್ಲಾಮಿಕ್‌ ಉಗ್ರಗಾಮಿಗಳು ದಾಳಿ ನಡೆಸಿದ್ದಾರೆ. ನೈಜೀರಿಯಾ ಮೂಲದ, ಇಸ್ಲಾಮಿಕ್‌ ಸ್ಟೇಟ್ ಸಮೂಹದ ಅಲ್‌–ಖೈದಾ ಜೊತೆ ಗುರುತಿಸಿಕೊಂಡಿರುವ ಬೊಕೊ ಹರಾಮ್ ಸಂಘಟನೆಯೂ ಕೂಡಾ ಇದರಲ್ಲಿ ಸೇರಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು