ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಂತ ಕ್ಷಿಪಣಿ ಅಭಿವೃದ್ಧಿಯತ್ತ ಆಸ್ಟೇಲಿಯಾ

Last Updated 31 ಮಾರ್ಚ್ 2021, 6:02 IST
ಅಕ್ಷರ ಗಾತ್ರ

ವೆಲ್ಲಿಂಗ್ಟನ್‌: ತನ್ನ ರಕ್ಷಣಾ ಸಾಮರ್ಥ್ಯವನ್ನು ಬಲಪಡಿಸುವ ಸಲುವಾಗಿ ಅಮೆರಿಕದ ಸಹಯೋಗದೊಂದಿಗೆ ಸ್ವಂತ ನಿರ್ದೇಶಿತ ಕ್ಷಿಪಣಿ ವ್ಯವಸ್ಥೆ ರೂಪಿಸಿಕೊಳ್ಳಲು ಆಸ್ಟ್ರೇಲಿಯಾ ಮುಂದಾಗಿದೆ.

‘ಬದಲಾಗಿರುವ ಜಾಗತಿಕ ಪರಿಸರ’ದಲ್ಲಿ ಶಸ್ತ್ರಾಸ್ತ್ರ ತಯಾರಕರೊಂದಿಗೆ ಪಾಲುದಾರಿಕೆ ನಡೆಸಿ ಕ್ಷಿಪಣಿ ಅಭಿವೃದ್ಧಿಪಡಿಸುವ ಯೋಜನೆ ಇದೆ, ಇದರಿಂದ ಸಾವಿರಾರು ಉದ್ಯೋಗ ಸೃಷ್ಟಿಯಾಗುವುದಲ್ಲದೆ, ರಫ್ತು ಅವಕಾಶವೂ ದೊರಕಲಿದೆ ಎಂದು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್‌ ಮಾರಿಸನ್‌ ಹೇಳಿದ್ದಾರೆ.

ರಕ್ಷಣೆ ಮತ್ತು ರಕ್ಷಣಾ ಕ್ಷೇತ್ರದಲ್ಲಿ 10 ವರ್ಷಗಳಲ್ಲಿ ಭಾರಿ ಬಂಡವಾಳ ಹೂಡಿಕೆ ನಡೆಸುವ ಭಾಗವಾಗಿ 1 ಶತಕೋಟಿ ಆಸ್ಟ್ರೇಲಿಯನ್‌ ಡಾಲರ್‌ ವ್ಯಯಿಸಲಾಗುವುದು. ಆಸ್ಟ್ರೇಲಿಯಾವನ್ನು ಸುರಕ್ಷಿತವಾಗಿ ಇಡುವುದು ಸಹ ಈ ಯೋಜನೆಯ ಹಿಂದೆ ಇದೆ ಎಂದು ಅವರು ಹೇಳಿದ್ದಾರೆ.

ಮುಂದಿನ 20 ವರ್ಷಗಳಲ್ಲಿ ಕ್ಷಿಪಣಿ ವ್ಯವಸ್ಥೆಗಾಗಿಯೇ ಆಸ್ಟ್ರೇಲಿಯಾ 100 ಶತಕೋಟಿ ಆಸ್ಟ್ರೇಲಿಯನ್‌ ಡಾಲರ್‌ ವ್ಯಯಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT