ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ್ಲಿನ್‌ನ ಈಜುಕೊಳಗಳಲ್ಲಿ ಮಹಿಳೆಯರಿಗೆ ಟಾಪ್‌ಲೆಸ್‌ ಆಗಿ ಸ್ನಾನ ಮಾಡಲು ಅವಕಾಶ

ಪುರುಷರಂತೆ ಮಹಿಳೆಯರಿಗೆ ಮೇಲ್ವಸ್ತ್ರ ಇಲ್ಲದೇ ಸ್ನಾನ ಮಾಡಲು ಅವಕಾಶ
Last Updated 11 ಮಾರ್ಚ್ 2023, 6:15 IST
ಅಕ್ಷರ ಗಾತ್ರ

ಬರ್ಲಿನ್‌: ಜರ್ಮನಿ ರಾಜಧಾನಿ ಬರ್ಲಿನ್‌ ನಗರದ ಈಜುಕೊಳಗಳಲ್ಲಿ ಪುರುಷರಂತೆ ಮಹಿಳೆಯರು ಕೂಡ ಟಾಪ್‌ಲೆಸ್‌ ಆಗಿ ಸ್ನಾನ ಮಾಡಬಹುದು ಎಂದು ನಿಯಮ ಹೊರಡಿಸಿದೆ.

ಈಜುಕೊಳವೊಂದರಲ್ಲಿ ಟಾಪ್‌ಲೆಸ್‌ ಆಗಿ ಸ್ನಾನ ಮಾಡಲು ಅವಕಾಶ ನಿರಾಕರಿಸಿದ್ದರಿಂದ ಮಹಿಳೆಯೊಬ್ಬರು ದೂರು ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಮಹಿಳೆಯರು ಕೂಡ ಮೇಲ್ವಸ್ತ್ರ ಧರಿಸದೇ ಸ್ನಾನ ಮಾಡಬಹುದು ಎಂದು ಆದೇಶ ಹೊರಡಿಸಲಾಗಿದೆ.

ಈಜುಕೊಳಗಳಲ್ಲಿ ಮಹಿಳೆಯರಿಗೆ ಪುರುಷರಷ್ಟೇ ಸಮಾನತೆ ಕಲ್ಪಿಸಬೇಕು. ಅವರಂತೆ ಮಹಿಳೆಯರಿಗೂ ಕೂಡ ಮೇಲ್ವಸ್ತ್ರ ಇಲ್ಲದೇ ಸ್ನಾನ ಮಾಡಲು ಅವಕಾಶ ನೀಡಬೇಕು ಎಂದು ತಮ್ಮ ಗುರುತು ಬಹಿರಂಗ ಪ‍ಡಿಸಲು ಒಲ್ಲದ ಮಹಿಳೆಯರೊಬ್ಬರು ಸೆನೆಟ್‌ಗೆ ದೂರು ನೀಡಿದ್ದರು.

ನ್ಯಾಯ, ವೈವಿಧ್ಯತೆ ಹಾಗೂ ತಾರತಮ್ಯ ವಿರೋಧಿ ನಿಲುವಿನಿಂದಾಗಿ ಮಹಿಳೆಯರು ಕೂಡ ‍ಪುರುಷರಂತೆ ಮೇಲ್ವಸ್ತ್ರ ಇಲ್ಲದೆಯೇ ಈಜುಕೊಳಗಲ್ಲಿ ಸ್ನಾನ ಮಾಡಬಹುದು ಎಂದು ಸೆನೆಟ್‌ ಆದೇಶ ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT