ಮಂಗಳವಾರ, ಮೇ 17, 2022
26 °C
ಅರ್ಜಿಗಳ ವಿಲೇವಾರಿ

ಎಚ್‌–1ಬಿ ವೀಸಾ: ವರ್ಷಾಂತ್ಯದವರೆಗೆ ಲಾಟರಿ ವ್ಯವಸ್ಥೆ ಮುಂದುವರಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಎಚ್‌–1ಬಿ ವೀಸಾ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ಅಂತಿಮ ಪಟ್ಟಿ ತಯಾರಿಸಲು ಸದ್ಯ ರೂಢಿಯಲ್ಲಿರುವ ಲಾಟರಿ ವ್ಯವಸ್ಥೆಯನ್ನು ಈ ವರ್ಷದ ಡಿಸೆಂಬರ್‌ 31ರ ವರೆಗೆ ಮುಂದುವರಿಸಲು ಅಧ್ಯಕ್ಷ ಜೋ ಬೈಡನ್‌ ಆಡಳಿತ ನಿರ್ಧರಿಸಿದೆ.

ಲಾಟರಿ ವ್ಯವಸ್ಥೆಯನ್ನು ರದ್ದು ಮಾಡುವುದಾಗಿ ಅಮೆರಿಕ ನಾಗರಿಕತ್ವ ಹಾಗೂ ವಲಸೆ ಸೇವೆಗಳ (ಯುಎಸ್‌ಸಿಐಎಸ್‌) ಇಲಾಖೆ ಜ.7ರಂದು ಹೇಳಿತ್ತು.

ವಿಶೇಷ ಕೌಶಲ ಹೊಂದಿರುವ ಅಭ್ಯರ್ಥಿಗಳನ್ನು ನೇಮಕ  ಮಾಡಿಕೊಳ್ಳಲು ಅಮೆರಿಕದ ಕಂಪನಿಗಳಿಗೆ ಎಚ್‌–1ಬಿ ವೀಸಾ ಸೌಲಭ್ಯ ಅನುವು ಮಾಡಿಕೊಡುತ್ತದೆ. ಭಾರತ ಹಾಗೂ ಚೀನಾ ಮೂಲದ ಸಾವಿರಾರು ಜನ ಅಭ್ಯರ್ಥಿಗಳನ್ನು ಅಮೆರಿಕದ ಐಟಿ ಕಂಪನಿಗಳು ಈ ಸೌಲಭ್ಯ ಬಳಸಿಕೊಂಡು ಪ್ರತಿ ವರ್ಷ ನೇಮಕ ಮಾಡಿಕೊಳ್ಳುತ್ತವೆ.

‘ಎಚ್‌–1ಬಿ ವೀಸಾ ಪಡೆಯಲು ನೋಂದಾಯಿಸುವ ವಿಧಾನ, ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದ ಪರಿಷ್ಕೃತ ನಿಯಮಗಳನ್ನು ರೂಪಿಸಲು ಯುಎಸ್‌ಸಿಐಎಸ್‌ಗೆ ಹೆಚ್ಚು ಸಮಯ ನೀಡಬೇಕಾಗಿದೆ. ಹೀಗಾಗಿ ಡಿ.31ರವರೆಗೆ ಲಾಟರಿ ವ್ಯವಸ್ಥೆಯನ್ನೇ ಮುಂದುವರಿಸಲು ತೀರ್ಮಾನಿಸಲಾಗಿದೆ’ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು