ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಆಮ್ಲಜನಕ ವಿತರಣೆ ವ್ಯವಸ್ಥೆ ವಿಸ್ತರಿಸಲು ಒತ್ತು: ಅಮೆರಿಕ

Last Updated 30 ಏಪ್ರಿಲ್ 2021, 6:52 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಭಾರತದಲ್ಲಿ ವೈದ್ಯಕೀಯ ಆಮ್ಲಜನಕ ವಿತರಣಾ ವ್ಯವಸ್ಥೆಯನ್ನು ಮತ್ತಷ್ಟು ವಿಸ್ತರಿಸಲು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಆಡಳಿತ ಮುಂದಾಗಿದೆ. ಆ ಮೂಲಕ ಕೋವಿಡ್‌–19 ನಿಂದ ಬಳುತ್ತಿರುವವರ ಜೀವ ಉಳಿಸಲು ನೆರವಾಗುವ ಉದ್ದೇಶವಿದೆ ಎಂದು ಯುಎಸ್‌ ಏಜೆನ್ಸಿ ಫಾರ್‌ ಇಂಟರ್‌ನ್ಯಾಷನಲ್‌ ಡೆವಲೆಪ್‌ಮೆಂಟ್‌ (ಯುಎಸ್‌ಎಐಡಿ) ಹೇಳಿದೆ.

‘ಭಾರತದಲ್ಲಿ ಕೋವಿಡ್‌–19 ರೋಗಿಗಳ ಸಂಖ್ಯೆ ಅಧಿಕವಾಗಿದ್ದು, ಈ ಸಂಖ್ಯೆ ದಿನೇದಿನೇ ಹೆಚ್ಚುತ್ತಲೇ ಇರುವುದು ಕಳವಳಕಾರಿ’ ಎಂದು ಯುಎಸ್‌ಎಐಡಿಯ ಹಿರಿಯ ಸಲಹೆಗಾರ ಜೆರೆಮಿ ಕೋನಿಂಡಿಕ್‌ ಹೇಳಿದ್ದಾರೆ.

‘ಚಿಕಿತ್ಸೆಗಾಗಿ ದಾಖಲಾಗುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಆಸ್ಪತ್ರೆಗಳು ಒತ್ತಡಕ್ಕೆ ಒಳಗಾಗಿವೆ. ಹೀಗಾಗಿ ಆಮ್ಲಜನಕ, ಜೀವರಕ್ಷಕ ಔಷಧಿಗಳ ತುರ್ತು ಪೂರೈಕೆ ಆಗಬೇಕಾಗಿದೆ ಎಂದು ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ’ ಎಂದು ಜೆರೆಮಿ ಹೇಳಿದ್ದಾರೆ.

‘ಭಾರತದೊಂದಿಗಿನ ಸಂಬಂಧ ನೆರವು ಆಧಾರಿತವಲ್ಲ. ಇದು ಪಾಲುದಾರಿಕೆಯ ಬುನಾದಿ ಮೇಲೆ ಭದ್ರವಾಗಿರುವ ಸಂಬಂಧ. ಕಳೆದ ವರ್ಷ ಕೋವಿಡ್‌ನಿಂದ ತತ್ತರಿಸಿದ್ದ ಅಮೆರಿಕಕ್ಕೆ ಭಾರತ ಔಷಧ ಕಳುಹಿಸಿ, ನೆರವು ನೀಡಿತ್ತು. ಅದಕ್ಕೆ ಪ್ರತಿಯಾಗಿ ನಾವೀಗ ಭಾರತದ ನೆರವಿಗೆ ನಿಂತಿದ್ದೇವೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT