ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಡನ್‌ ಅವರ ‘ಮೇಜರ್‌’ ನಾಯಿಯಿಂದ ಗುಪ್ತಚರ ಏಜೆಂಟ್‌ಗೆ ‘ಮೈನರ್' ಗಾಯ!

ಶ್ವೇತಭವನದ ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು ಕಷ್ಟಪಡುತ್ತಿರುವ ಶ್ವಾನ
Last Updated 10 ಮಾರ್ಚ್ 2021, 6:59 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಅವರ ‘ಮೇಜರ್‌’ ಹೆಸರಿನ ನಾಯಿ ಗುಪ್ತಚರ ಇಲಾಖೆಯ ಏಜೆಂಟ್‌ ಒಬ್ಬರಿಗೆ ಕಚ್ಚಿ ಗಾಯಗೊಳಿಸುವ ಮೂಲಕ ಜಾಗತಿಕ ಮಟ್ಟದ ಸುದ್ದಿ ಮಾಡಿಬಿಟ್ಟಿದೆ.

ಸೋಮವಾರ ಶ್ವೇತಭವನದ ಭದ್ರತಾ ಸಿಬ್ಬಂದಿಯೊಬ್ಬರ ಮೇಲೆ ಮೇಜರ್‌ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಸಿಬ್ಬಂದಿಗೆ ಸಣ್ಣ–ಪುಟ್ಟ ಗಾಯಗಳಾಗಿವೆ. ಈ ಬಳಿಕ ಮೇಜರ್‌ ಮತ್ತು ಚಾಂಪ್‌ ಹೆಸರಿನ ಇನ್ನೊಂದು ನಾಯಿಯನ್ನು ಶ್ವೇತಭವನದಿಂದ ಹೊರಗೆ ಕರೆದುಕೊಂಡು ಹೋಗಲಾಗಿದೆ.

‘ಶ್ವಾನಗಳಿಗೆ ಹೊಸ ವಾತಾವರಣ ಮತ್ತು ಹೊಸ ಜನರೊಂದಿಗೆ ಬೆರೆಯಲು ಸ್ವಲ್ಪ ಸಮಯ ಬೇಕಾಗಿದೆ’ ಎಂದು ಶ್ವೇತ ಭವನದ ಮಾಧ್ಯಮ ಕಾರ್ಯದರ್ಶಿ ಜೆನ್ ಸಾಕಿ ಅವರು ಹೇಳಿದರು.

‘ಬೈಡನ್‌ ಅವರ ಪತ್ನಿ ಜಿಲ್‌, ಮೂರು ದಿನದ ಸೇನಾ ಪ್ರವಾಸಕ್ಕಾಗಿ ಕ್ಯಾಲಿಫೋರ್ನಿಯಾಗೆ ತೆರಳಿದ್ದಾರೆ. ಹಾಗಾಗಿ ಡೆಲವೇರ್‌ನಲ್ಲಿರುವ ಬೈಡನ್‌ ಅವರ ಕುಟುಂಬ ಸ್ನೇಹಿತರ ಮನೆಯಲ್ಲಿ ‘ಚಾಂಪ್‘‌ ಮತ್ತು ‘ಮೇಜರ್‌'ಮೂರು ದಿನಗಳ ಕಾಲ ಇರಲಿವೆ’ ಎಂದು ಜಿಲ್‌ ಬೈಡನ್‌ ಅವರ ವಕ್ತಾರ ಮೈಕೆಲ್ ಲಾರೋಸಾ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT