ಭಾನುವಾರ, ಆಗಸ್ಟ್ 1, 2021
26 °C
‘ಮತದಾನ ಹಕ್ಕುಗಳ ಸಂರಕ್ಷಿಸಿದರೆ ಜಾನ್‌ ಲೆವಿಸ್‌ಗೆ ಗೌರವ ಸಲ್ಲಿಸಿದಂತೆ’

ನಾಗರಿಕ ಹಕ್ಕುಗಳ ಹೋರಾಟಗಾರಗೆ ಬೈಡನ್‌, ಕಮಲಾ ಹ್ಯಾರಿಸ್‌ ಗೌರವ

ಎಪಿ Updated:

ಅಕ್ಷರ ಗಾತ್ರ : | |

Prajavani

ಅಟ್ಲಾಂಟ: ‘ಪ್ರಜೆಗಳ ಮತದಾನ ಹಕ್ಕನ್ನು ರಕ್ಷಿಸುವ ಕಾಯ್ದೆಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಮೂಲಕ ಅಮೆರಿಕದ ನಾಗರಿಕ ಹಕ್ಕುಗಳ ಹೋರಾಟಗಾರ, ಸಂಸದರೂ ಆಗಿದ್ದ ಜಾನ್‌ ಲೆವಿಸ್‌ ಅವರಿಗೆ ಗೌರವ ಸಲ್ಲಿಸಬೇಕು’ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌ ಹೇಳಿದರು.

ಸಂಸತ್‌ನಲ್ಲಿ ಜಾರ್ಜಿಯಾ ರಾಜ್ಯವನ್ನು ಪ್ರತಿನಿಧಿಸುತ್ತಿದ್ದ ಜಾನ್‌ ಲೆವಿಸ್‌ ಅವರು ಮೇದೊಜೀರಕ ಗ್ರಂಥಿಯ ಕ್ಯಾನ್ಸರ್‌ನಿಂದಾಗಿ ಕಳೆದ ವರ್ಷ ಜುಲೈ 17ರಂದು ನಿಧನರಾದರು. ಆಗ ಅವರಿಗೆ 80 ವರ್ಷ ವಯಸ್ಸಾಗಿತ್ತು. ಮೊದಲ ಪುಣ್ಯಸ್ಮರಣೆ ನಿಮಿತ್ತ ಜಾನ್‌ ಅವರಿಗೆ ಗೌರವ ಸಲ್ಲಿಸಿ ಬೈಡನ್‌ ಹಾಗೂ ಕಮಲಾ ಹ್ಯಾರಿಸ್‌ ಮಾತನಾಡಿದರು.

‘ಲೆವಿಸ್‌ ನಿಧನರಾಗುವುದಕ್ಕೂ ಕೆಲ ದಿನಗಳ ಮುಂಚೆ ನಾನು ಹಾಗೂ ಪತ್ನಿ ಜಿಲ್‌ ಬೈಡನ್‌ ಅವರನ್ನು ಭೇಟಿ ಮಾಡಿದ್ದೆವು. ಅವರ ಆರೋಗ್ಯದ ಬಗ್ಗ ನಾವು ವ್ಯಕ್ತಪಡಿಸಿದ ಕಳವಳಕ್ಕೆ ಉತ್ತರಿಸದ ಅವರು, ದೇಶದ ಏಕತೆ ಕಾಪಾಡುವ ನಿಟ್ಟಿನಲ್ಲಿ ಆಗಬೇಕಿರುವ ಕೆಲಸದ ಮೇಲೆ ಗಮನ ಕೇಂದ್ರೀಕರಿಸಿ ಎಂಬುದಾಗಿ ನಮಗೆ ಕಿವಿಮಾತು ಹೇಳಿದ್ದರು’ ಎಂದು ಬೈಡನ್‌ ನೆನಪಿಸಿಕೊಂಡರು.

‘ದೇಶವನ್ನು ಆರ್ಥಿಕವಾಗಿ ಸದೃಢಗೊಳಿಸುವುದು, ಜನರ ದುಡಿಮೆಗೆ ಗೌರವ ಸಿಗುವಂತೆ ಮಾಡುವುದು, ಜನರಿಗೆ ಉದ್ಯೋಗ, ಒಳ್ಳೆಯ ವೇತನ ಸಿಗುವಂತೆ ಮಾಡುವುದು, ಸಾಮಾಜಿಕ ನ್ಯಾಯ ನೀಡುವುದೇ ಈಗ ಆಗಬೇಕಿರುವ ಕಾರ್ಯಗಳಾಗಿವೆ’ ಎಂದೂ ಹೇಳಿದರು.

ಕಮಲಾ ಹ್ಯಾರಿಸ್‌ ಮಾತನಾಡಿ, ‘ಜಾನ್‌ ಲೆವಿಸ್‌ ಅಮೆರಿಕದ ಹೀರೊ’ ಎಂದು ಬಣ್ಣಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು