ಮಂಗಳವಾರ, ಏಪ್ರಿಲ್ 20, 2021
27 °C
ಕೋವಿಡ್‌ ಹಿನ್ನೆಲೆಯಲ್ಲಿ ವಿಶೇಷ ಆರ್ಥಿಕ ಪ್ಯಾಕೇಜ್‌ ಘೋಷಣೆ

ವಿಶೇಷ ಆರ್ಥಿಕ ಪ್ಯಾಕೇಜ್‌; ಬೈಡೆನ್‌ರ ಪ್ರಾರಂಭಿಕ ಆಡಳಿತ ಸುಗಮ ನಿರೀಕ್ಷೆ

ಎಪಿ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಕೋವಿಡ್‌–19ನಿಂದಾಗಿ ಕುಸಿದಿರುವ ಆರ್ಥಿಕತೆಗೆ ಪುನಶ್ಚೇತನ ನೀಡಲು ವಿಶೇಷ ಪ್ಯಾಕೇಜ್‌ ಘೋಷಣೆ ಸೇರಿದಂತೆ ಶ್ವೇತಭವನ ವರ್ಷಾಂತ್ಯದ ವೇಳೆಗೆ ಪ್ರಕಟಿಸಿರುವ ಕ್ರಮಗಳಿಂದ, ನಿಯೋಜಿತ ಅಧ್ಯಕ್ಷ ಜೋ ಬೈಡೆನ್‌ ಅವರ ಆರಂಭಿಕ ದಿನಗಳ ಆಡಳಿತ ಸುಲಲಿತವಾಗಿರಲಿದೆ ಎಂದು ನಿರೀಕ್ಷಿಸಲಾಗಿದೆ.

ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಡಳಿತದ ಅವಧಿಯಲ್ಲಿ, ಆಡಳಿತದ ವಿವಿಧ ಹಂತಗಳಲ್ಲಿ ಕಂಡು ಬಂದಿದ್ದ ಭಿನ್ನಾಭಿಪ್ರಾಯಗಳನ್ನು ನಿವಾರಿಸಿ, ಶ್ವೇತಭವನದ ಗತವೈಭವವನ್ನು ಮರುಸ್ಥಾಪಿಸಲು ಶ್ರಮಿಸುವ ಸುಳಿವನ್ನು ಬೈಡೆನ್‌ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಬೈಡೆನ್‌ ಅವರ ಭವಿಷ್ಯದ ಕ್ರಮಗಳಿಗೆ ಈಗ ಘೋಷಿಸಲಾಗಿರುವ ಪ್ಯಾಕೇಜ್‌ ಸಹ ನೆರವಾಗಲಿದೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ.

‘ದೇಶದ ಹಿತದೃಷ್ಟಿಯಿಂದ ಕೈಗೊಳ್ಳುವ ಕೆಲವು ನಿರ್ಧಾರಗಳಿಗೆ ಪಕ್ಷಭೇದ ಮರೆತು ನಾವು ಬೆಂಬಲ ಸೂಚಿಸುತ್ತೇವೆ ಎಂಬುದನ್ನು ಉಭಯ ಸದನಗಳ ಸದಸ್ಯರು ವಿಶೇಷ ಪ್ಯಾಕೇಜ್‌ಗೆ ಅನುಮೋದನೆ ನೀಡುವ ಮೂಲಕ ತೋರಿದ್ದಾರೆ. ಬರುವ ಜನವರಿ ಅಥವಾ ಫೆಬ್ರುವರಿಯಲ್ಲಿ ಇಂಥ ಮತ್ತೊಂದು ಪ್ಯಾಕೇಜ್‌ ಘೋಷಿಸಬೇಕಾಗುತ್ತದೆ. ಆಗಲೂ ಇದೇ ರೀತಿ ಬೆಂಬಲ ಸಿಗಲಿದೆ ಎಂದು ಆಶಿಸುತ್ತೇನೆ‘ ಎಂದು ಬೈಡನ್‌ ಹೇಳಿದ್ದಾರೆ.

ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಸಂಸತ್‌ನ ಎರಡೂ ಸದನಗಳ ಬಹುತೇಕ ಸದಸ್ಯರ ಅಭಿಪ್ರಾಯಗಳಿಗೆ ಮನ್ನಣೆ ಇರಲಿಲ್ಲ. ಆಡಳಿತದ ಪ್ರಮುಖ ಸ್ಥಾನಗಳಲ್ಲಿರುವ ಅಧಿಕಾರಿಗಳ ಸಾಮರ್ಥ್ಯವನ್ನು ಸಹ ಸಮರ್ಥವಾಗಿ ಬಳಸಿಕೊಳ್ಳಲಾಗಿರಲಿಲ್ಲ. ಇಂಥ ಧೋರಣೆಯನ್ನು ಬದಲಾಯಿಸಲಾಗುವುದು ಎಂಬ ಸುಳಿವನ್ನು ಸಹ  ಅವರು ನೀಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು