ಶುಕ್ರವಾರ, ಆಗಸ್ಟ್ 19, 2022
25 °C

'ಹವಾಮಾನ ಮತ್ತು ಇಂಧನ' ತಂಡದ ಪ್ರಮುಖರ ಹೆಸರು ಪ್ರಕಟಿಸಿದ ಬೈಡನ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಆಯ್ಕೆಯಾಗಿರುವ ಜೋ ಬೈಡನ್ ಅವರು ತನ್ನ ಹವಾಮಾನ ಮತ್ತು ಇಂಧನ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ತಂಡವನ್ನು ಪ್ರಕಟಿಸಿದ್ದಾರೆ.

ಸಮಿತಿಯ ಆಂತರಿಕ ಕಾರ್ಯದರ್ಶಿಯಾಗಿ ಸಂಸದೆ ಡೆಬ್ ಹಾಲೆಂಡ್, ಇಂಧನ ಕಾರ್ಯದರ್ಶಿಯಾಗಿ ಜೆನ್ನಿಫರ್ ಗ್ರ್ಯಾನ್‌ಹೋಮ್, ಪರಿಸರ ಸಂರಕ್ಷಣಾ ಸಂಸ್ಥೆಯ ನಿರ್ವಾಹಕರಾಗಿ ಮೈಕೆಲ್ ರೇಗನ್ ಮತ್ತು ಪರಿಸರ ಗುಣಮಟ್ಟ ಕುರಿತ ಪರಿಷತ್ತಿನ ಅಧ್ಯಕ್ಷರಾಗಿ ಬ್ರೆಂಡಾ ಮಲ್ಲೊರಿಯನ್ನು ಆಯ್ಕೆ ಮಾಡಲಾಗಿದೆ.

ಬೈಡನ್ ಅವರು ಜಿನಾ ಮ್ಯಾಕಾರ್ಥಿ ಅವರನ್ನು ರಾಷ್ಟ್ರೀಯ ಹವಾಮಾನ ಸಲಹೆಗಾರರಾಗಿ ಹಾಗೂ ಪಾಕಿಸ್ತಾನಿ – ಅಮೆರಿಕನ್‌ ಅಲಿ ಝೈದಿ ಅವರನ್ನು ಉಪ ಸಲಹೆಗಾರರನ್ನಾಗಿ ನೇಮಿಸಿರುವುದಾಗಿ ಗುರುವಾರ ಪ್ರಕಟಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು