ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನು ಒಂದು ರಾಜ್ಯದಲ್ಲಿ ಗೆದ್ದರೆ ಜೊ ಬೈಡನ್‌ಗೆ 270 ಮತ; ಅವರೇ ಅಮೆರಿಕ ಅಧ್ಯಕ್ಷ!

Last Updated 6 ನವೆಂಬರ್ 2020, 13:04 IST
ಅಕ್ಷರ ಗಾತ್ರ
ADVERTISEMENT
""

ಬ್ಲೂಮ್‌ಬರ್ಗ್‌: ರಿಪಬ್ಲಿಕನ್‌ ಪಾರ್ಟಿಯ ಭದ್ರ ಕೋಟೆ ಜಾರ್ಜಿಯಾದಲ್ಲೂ ಡೆಮಾಕ್ರಟ್ ಪಕ್ಷದ ಜೊ ಬೈಡನ್ ಮುನ್ನಡೆ ಸಾಧಿಸಿದ್ದಾರೆ. ಅಧ್ಯಕ್ಷೀಯ ಚುನಾವಣೆಯಲ್ಲಿ 1992ರಿಂದ ಈವರೆಗೂ ಡೆಮಾಕ್ರಟ್‌ ಅಭ್ಯರ್ಥಿಗೆ ಬೆಂಬಲ ನೀಡಿರಲಿಲ್ಲ. ಈಗ ಬೈಡನ್‌ ಅಧ್ಯಕ್ಷ ಸ್ಥಾನಕ್ಕೆ ಸಮೀಪದಲ್ಲಿದ್ದಾರೆ.

ಇನ್ನು ಒಂದು ರಾಜ್ಯದಲ್ಲಿ ಬೈಡನ್‌ ಗೆಲುವು ಸಾಧಿಸಿದರೆ, ಅಮೆರಿಕ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ. ಜಾರ್ಜಿಯಾ, ಪೆನ್ಸಿಲ್ವೇನಿಯಾ, ನೆವಾಡಾ ಹಾಗೂ ನಾರ್ಥ್‌ ಕರೊಲಿನಾದ ಮತ ಎಣಿಕೆಯು ಈವರೆಗೂ ನಿರ್ಣಾಯಕವಾಗಿದೆ. 538 ಪ್ರತಿನಿಧಿಗಳ ಪೈಕಿ 270 ಸದಸ್ಯರ ಬೆಂಬಲ ಪಡೆಯುವವರು ಅಧ್ಯಕ್ಷರಾಗಿ ಆಯ್ಕೆ ಆಗಲಿದ್ದಾರೆ.

ಬೈಡನ್‌ 264 ಎಲೆಕ್ಟೊರಲ್‌ ಮತಗಳನ್ನು ಗಳಿಸಿದ್ದರೆ, ಪ್ರತಿಸ್ಪರ್ಧಿ ಡೊನಾಲ್ಡ್‌ ಟ್ರಂಪ್‌ 214 ಮತಗಳನ್ನು ಪಡೆದಿದ್ದಾರೆ. ಜಾರ್ಜಿಯಾದಲ್ಲಿ ಶುಕ್ರವಾರ ಬೈಡನ್‌, ಟ್ರಂಪ್‌ಗಿಂತ 917 ಮತಗಳ ಮುನ್ನಡೆ ಸಾಧಿಸಿದ್ದಾರೆ. ಅಂಚೆ ಮತಗಳು ಡೆಮಾಕ್ರಟ್‌ ಪಕ್ಷಕ್ಕೆ ವರವಾಗಿ ಪರಿಣಮಿಸಿದ್ದು, ಟ್ರಂಪ್‌ ಅವರನ್ನು ಹಿಂದಕ್ಕೆ ಸರಿಸಿದೆ. ಈ ನಡುವೆ ಟ್ರಂಪ್‌ ಅಂಚೆ ಮತಗಳ ಎಣಿಕೆ ನಿಲ್ಲಿಸಬೇಕು, ಈ ಬಗ್ಗೆ ಕಾನೂನು ಹೋರಾಟ ನಡೆಸುವುದಾಗಿ ಘೋಷಿಸಿದ್ದಾರೆ.

ಬೈಡನ್‌ ಒಟ್ಟು 7,34,89,032 ಮತಗಳನ್ನು ಗಳಿಸಿದ್ದರೆ, ಟ್ರಂಪ್‌ 6,96,22,347 ಮತಗಳನ್ನು ಪಡೆದಿದ್ದಾರೆ. ಜಾರ್ಜಿಯಾ (16), ನೆವಾಡಾ (6), ನಾರ್ಥ್ ಕರೊಲಿನಾ (15) ಹಾಗೂ ಪೆನ್ಸಿಲ್ವೇನಿಯಾ (20 ಎಲೆಕ್ಟೊರಲ್‌ ಮತಗಳು) ರಾಜ್ಯಗಳಲ್ಲಿನ ಫಲಿತಾಂಶ ಅಧ್ಯಕ್ಷರ ಆಯ್ಕೆಯಲ್ಲಿ ನಿರ್ಣಾಯಕವಾಗಲಿವೆ. 2016ರ ಚುನಾವಣೆಯಲ್ಲಿ ಪೆನ್ಸಿಲ್ವೇನಿಯಾ ಮತ್ತು ಜಾರ್ಜಿಯಾದಲ್ಲಿ ಟ್ರಂಪ್‌ ಅವರು ಗೆಲುವು ಸಾಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT