ಶುಕ್ರವಾರ, ಏಪ್ರಿಲ್ 16, 2021
30 °C
ಅಮೆರಿಕ ಸರ್ಕಾರದ ಅತ್ಯುನ್ನತ ಹುದ್ದೆ ಅಲಂಕರಿಸಿದ ಮೊದಲ ಭಾರತೀಯ–ಅಮೆರಿಕನ್

ಅಮೆರಿಕ: ಸಿಬ್ಬಂದಿ ನಿರ್ವಹಣಾ ಕಚೇರಿ ಮುಖ್ಯಸ್ಥೆಯಾಗಿ ಕಿರಣ್ ಅಹುಜಾ ನೇಮಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು, ಅಮೆರಿಕದ ಎರಡು ಕೋಟಿ ನೌಕರರನ್ನು ನಿರ್ವಹಿಸುವ, ಸಿಬ್ಬಂದಿ ನಿರ್ವಹಣಾ ಕಚೇರಿ ಮುಖ್ಯಸ್ಥರನ್ನಾಗಿ ಭಾರತೀಯ–ಅಮೆರಿಕನ್ ವಕೀಲ ಮತ್ತು ಹಕ್ಕುಗಳ ಹೋರಾಟಗಾರ ಕಿರಣ್ ಅಹುಜಾ ಅವರನ್ನು ನಾಮನಿರ್ದೇಶನ ಮಾಡಿದ್ದಾರೆ.

ಈ ನಾಮನಿರ್ದೇಶನವನ್ನು ಸೆನೆಟ್ ದೃಢಪಡಿಸಿದರೆ, 49 ವರ್ಷದ ಅಹುಜಾ ಅವರು, ಅಮೆರಿಕ ಸರ್ಕಾರದ ಈ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿದ ಮೊದಲ ಭಾರತೀಯ–ಅಮೆರಿಕನ್‌ ವ್ಯಕ್ತಿಯಾಗುತ್ತಾರೆ.

ಕಿರಣ್‌ ಅವರು, 2015 ರಿಂದ 2017 ರವರೆಗೆ ಅಮೆರಿಕದ ಸಿಬ್ಬಂದಿ ನಿರ್ವಹಣಾ ನಿರ್ದೇಶಕರ ಕಚೇರಿಯ  ಸಿಬ್ಬಂದಿಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಎರಡು ದಶಕಗಳಿಗಿಂತಲೂ ಹೆಚ್ಚು ಸಾರ್ವಜನಿಕ ಸೇವೆ ಮತ್ತು ಲಾಭರಹಿತ/ ಸಾಮಾಜಿಕ ಸೇವಾ ವಲಯದಲ್ಲಿ ಸೇವೆ ಸಲ್ಲಿಸಿರುವ ಅನುಭವ ಹೊಂದಿದ್ದಾರೆ.

ಈ ಮೊದಲು ಅವರು ಅಮೆರಿಕದ ನ್ಯಾಯಾಂಗ ಇಲಾಖೆಯಲ್ಲಿ ನಾಗರಿಕ ಹಕ್ಕುಗಳ ವಕೀಲರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.

2003 ರಿಂದ 2008 ರವರೆಗೆ, ಕಿರಣ್‌ ಅಹುಜಾ ಅವರು ನ್ಯಾಷನಲ್ ಏಷ್ಯನ್ ಪೆಸಿಫಿಕ್ ಅಮೆರಿಕನ್ ವುಮೆನ್ಸ್ ಫೋರಂನ ಸ್ಥಾಪಕ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು