ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಕ್ರೇನಿಗೆ ಮಧ್ಯಮ ಶ್ರೇಣಿಯ ರಾಕೆಟ್‌ ವ್ಯವಸ್ಥೆ ರವಾನೆ: ಅಮೆರಿಕ

ಸೇನಾ ನೆರವಿನ ಭಾಗವಾಗಿ ರಾಕೆಟ್‌ ವ್ಯವಸ್ಥೆ, ಹೆಲಿಕಾಪ್ಟರ್‌, ಯುದ್ಧತಂತ್ರದ ವಾಹನಗಳ ರವಾನೆ
Last Updated 1 ಜೂನ್ 2022, 14:31 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಉಕ್ರೇನಿಗೆ ಅತ್ಯಾಧುನಿಕ ಮಧ್ಯಮ ಶ್ರೇಣಿಯ ರಾಕೆಟ್‌ ವ್ಯವಸ್ಥೆಗಳನ್ನು ಕಳುಹಿಸಿಕೊಡುವುದಾಗಿ ಅಮೆರಿಕ ತಿಳಿಸಿದೆ.

ಡಾನ್‌ಬಾಸ್‌ ಪ್ರದೇಶದಲ್ಲಿ ರಷ್ಯಾಗೆ ಪ್ರತಿರೋಧ ನೀಡಲು ಪ್ರಬಲ ಶಸ್ತ್ರಾಸ್ತ್ರಗಳ ಅಗತ್ಯವಿದೆ ಎಂದು ಉಕ್ರೇನ್‌ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಅಲ್ಪ ಪ್ರಮಾಣದ ರಾಕೆಟ್‌ ವ್ಯವಸ್ಥೆ ರವಾನೆಗೆ ಅಮೆರಿಕ ನಿರ್ಧರಿಸಿದೆ.

ರಷ್ಯಾ ವಿರುದ್ಧದ ಹೋರಾಟಕ್ಕೆ ಉಕ್ರೇನಿಗೆ ಒದಗಿಸಲಾಗುತ್ತಿರುವ 5,420 ಕೋಟಿ ರೂಪಾಯಿ (700 ಮಿಲಿಯನ್‌ ಡಾಲರ್‌) ಸೇನಾ ನೆರವಿನ ಭಾಗವಾಗಿ ರಾಕೆಟ್‌ ವ್ಯವಸ್ಥೆ, ಹೆಲಿಕಾಪ್ಟರ್‌, ಯುದ್ಧತಂತ್ರದ ವಾಹನಗಳನ್ನು ರವಾನಿಸಲಾಗುತ್ತಿದೆ ಎಂದು ಸರ್ಕಾರದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT