ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹವಾಮಾನ ಬದಲಾವಣೆ, ಆರೋಗ್ಯ ಸುರಕ್ಷಾ ಮಸೂದೆಗೆ ಬೈಡನ್‌ ಸಹಿ

Last Updated 17 ಆಗಸ್ಟ್ 2022, 14:51 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಡೆಮಾಕ್ರಟ್‌ಗಳ ಮಹತ್ವಾಕಾಂಕ್ಷಿಯ ಹವಾಮಾನ ಬದಲಾವಣೆ ಮತ್ತು ಆರೋಗ್ಯ ಸುರಕ್ಷಾ ಮಸೂದೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಮಂಗಳವಾರ ಸಹಿ ಮಾಡಿದರು. ಅಮೆರಿಕ ಕಾಂಗ್ರೆಸ್‌ನ ಉಭಯ ಸದನಗಳಲ್ಲಿ ಕಳೆದ ವಾರ ಈ ಮಸೂದೆ ಅಂಗೀಕಾರವಾಗಿತ್ತು.

ಮೂರು ತಿಂಗಳಲ್ಲಿ ಎದುರಾಗಲಿರುವ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟ್‌ಗಳಿಗೆ ಇದು ಮಹತ್ವದ ಚುನಾವಣಾ ಅಸ್ತ್ರವಾಗಿ ಪರಿಣಮಿಸಲಿದೆ ಎಂದು ವಿಶ್ಲೇಷಿಸಲಾಗಿದೆ.

ಈ ಶಾಸನದಿಂದಾಗಿ ಅಮೆರಿಕದ ಫೆಡರಲ್‌ ಸರ್ಕಾರವು ಹವಾಮಾನ ಬದಲಾವಣೆ ವಿರುದ್ಧ ಹೋರಾಡಲು ದಶಕದಲ್ಲಿ ಸುಮಾರು 375 ಶತಕೋಟಿ ಡಾಲರ್‌ಗಳನ್ನು ಹೂಡಿಕೆ ಮಾಡಲಿದೆ. ಅಲ್ಲದೆ ವೈದ್ಯಕೀಯ ಸೌಲಭ್ಯ ಸ್ವೀಕರಿಸುವವರಿಗೆ ವಾರ್ಷಿಕವಾಗಿ 2,000 ಡಾಲರ್‌ನಷ್ಟು ಔಷಧಿಗಳನ್ನು ಖರೀದಿಸಲು ಇದು ನೆರವಾಗುತ್ತದೆ.

ಕೊರೊನಾ ವೈರಸ್‌ ಸಾಂಕ್ರಾಮಿಕ ಕಾಲದಲ್ಲಿ ನೀಡಲಾಗುತ್ತಿದ್ದ ಸಬ್ಸಿಡಿಗಳನ್ನು ವಿಸ್ತರಿಸುವ ಮೂಲಕ ಅಮೆರಿಕದ ಸುಮಾರು 13 ಲಕ್ಷ ಪ್ರಜೆಗಳಿಗೆ ಆರೋಗ್ಯ ವಿಮೆಪಾವತಿಸಲೂ ಈಶಾಸನನೆರವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT