ಸೋಮವಾರ, ಅಕ್ಟೋಬರ್ 18, 2021
25 °C

ಪೆಂಟಗನ್‌ ಪ್ರಮುಖ ಹುದ್ದೆಗೆ ಭಾರತೀಯ ಅಮೆರಿಕನ್‌ ಆಶೀಶ್‌ ನೇಮಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ಭಾರತೀಯ ಅಮೆರಿಕನ್‌ ಆಶೀಶ್‌ ವಜೀರಾನಿ ಅವರನ್ನು ಪೆಂಟಗನ್‌ನ ಪ್ರಮುಖ ಹುದ್ದೆಯೊಂದಕ್ಕೆ ನೇಮಕ ಮಾಡಲಾಗಿದೆ.

ಆಶೀಶ್ ಅವರನ್ನು ರಕ್ಷಣಾ ಇಲಾಖೆಯ ಸಿಬ್ಬಂದಿ ಹಾಗೂ ಸನ್ನದ್ಧತೆ ವಿಭಾಗದ ಉಪ ಅಧೀನಕಾರ್ಯದರ್ಶಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದಾರೆ.

ಮ್ಯಾನೇಜ್‌ಮೆಂಟ್‌ ಕನ್ಸಲ್ಟಂಟ್ ಆಗಿರುವ ಆಶೀಶ್, ಪ್ರಸ್ತುತ ‘ಎ2ಒ ಸ್ಟ್ರಾಟಜೀಸ್‌’ ಎಂಬ ಸಂಸ್ಥೆಯ ಪ್ರಾಚಾರ್ಯರಾಗಿದ್ದಾರೆ. ಈ ಸಂಸ್ಥೆ ವಾಣಿಜ್ಯ, ಲಾಭರಹಿತ ಸಂಸ್ಥೆಗಳು ಹಾಗೂ ದೊಡ್ಡ ಉದ್ಯಮಗಳಿಗೆ ಸಲಹೆ ನೀಡುತ್ತಿದ್ದಾರೆ.

ವಜೀರಾನಿ ಅವರು ಅಮೆರಿಕ ನೌಕಾಪಡೆಯಲ್ಲಿ 1986ರಿಂದ 1993ರ ವರೆಗೆ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ ಎಂದು ಶ್ವೇತಭವನದ ಪ್ರಕಟಣೆ ತಿಳಿಸಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು