ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕನ್ನರನ್ನು ಮೂರ್ಖರಂತೆ ಕಾಣುತ್ತಿರುವ ಬೈಡನ್‌: ಎಲೊನ್‌ ಮಸ್ಕ್‌

Last Updated 28 ಜನವರಿ 2022, 12:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಅಮೆರಿಕನ್ನರನ್ನು ಮೂರ್ಖರಂತೆ ಕಾಣುತ್ತಿದ್ದಾರೆ ಎಂದು ಎಲೆಕ್ಟ್ರಿಕ್‌ಕಾರು ತಯಾರಕ ಸಂಸ್ಥೆ ‘ಟೆಸ್ಲಾ’ದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ಎಲೊನ್‌ ಮಸ್ಕ್‌ ಟ್ವೀಟ್‌ ಮಾಡಿದ್ದಾರೆ.

ಬೈಡನ್‌ ಅವರು ಇತ್ತೀಚೆಗಷ್ಟೇ ಜನಲರ್‌ ಮೋಟರ್ಸ್‌ ಮತ್ತು ಫೋರ್ಡ್‌ ಮೋಟರ್ಸ್‌ ಕಾರ್ಯನಿರ್ವಾಹಕರನ್ನು ಭೇಟಿ ಮಾಡಿದ್ದರು. 1.75 ಟ್ರಿಲಿಯನ್ ಡಾಲರ್‌ ಮೊತ್ತದ ‘ಬಿಲ್ಡ್ ಬ್ಯಾಕ್ ಬೆಟರ್’ ಕಾಯ್ದೆಯ ಕುರಿತು ಚರ್ಚಿಸಲು ಜನಲರ್‌ ಮೋಟರ್ಸ್‌ ಸಿಇಒ ಮೇರಿ ಬಾರ್ರಾ ಮತ್ತು ಫೋರ್ಡ್ ಸಿಇಒ ಜಿಮ್ ಫಾರ್ಲೆ ಅವರನ್ನು ಬೈಡನ್‌ ವೈಟ್ ಹೌಸ್‌ಗೆ ಆಹ್ವಾನಿಸಿದ್ದರು.

ಆದರೆ, ಕಾಯ್ದೆಯನ್ನು ಬೆಂಬಲಿಸಲು ಸೆನೆಟರ್‌ ಜೋ ಮಂಚಿನ್‌ ಅವರು ಮೊದಲಿಗೆ ನಿರಾಕರಿಸಿದ್ದರು. ಇದರ ಬೆನ್ನಿಗೇ ಕಾಯ್ದೆಯ ಬಗ್ಗೆ ಅಮೆರಿಕ ಸೆನೆಟ್‌ನಲ್ಲಿ ಪರ ವಿರೋಧ ವ್ಯಕ್ತವಾಗಿದೆ.

ಈ ಮಸೂದೆಯು ದೇಶೀಯ ಎಲೆಕ್ಟ್ರಿಕ್ ವಾಹನಗಳ ಟ್ಯಾಕ್ಸ್‌ ಕ್ರೆಡಿಟ್‌ ಅನ್ನು 7,500 ಡಾಲರ್‌ನಿಂದ 12,500 ಡಾಲರ್‌ಗೆ ಹೆಚ್ಚಿಸಲಿದೆ.

ಎಲೆಕ್ಟ್ರಿಕ್ ವಾಹನ ಉತ್ಪಾದನೆಯನ್ನು ಹೆಚ್ಚಿಸಲು ಮಿಚಿಗನ್‌ನಲ್ಲಿ ಜನರಲ್‌ ಮೋಟರ್ಸ್‌ 7 ಶತಕೋಟಿ ಡಾಲರ್‌ ಹೂಡಿಕೆ ಮಾಡುತ್ತಿರುವುದನ್ನು ಬಿಡೆನ್ ಹೊಗಳಿದ್ದಾರೆ ಎಂದು ವರದಿಗಳು ಪ್ರಕಟವಾಗಿವೆ.

ಇದಿಷ್ಟೇ ಅಲ್ಲದೇ, ಜನಲರ್‌ ಮೋಟರ್ಸ್‌ ಮತ್ತು ಫೋರ್ಡ್‌ನಂತಹ ಕಂಪನಿಗಳು ಹಿಂದೆಂದಿಗಿಂತಲೂ ಹೆಚ್ಚು ಎಲೆಕ್ಟ್ರಿಕ್ ವಾಹನಗಳನ್ನು ಇಲ್ಲಿ ನಿರ್ಮಿಸುತ್ತಿವೆ ಎಂದು ಬೈಡನ್‌ ಇತ್ತೀಚೆಗೆ ಟ್ವೀಟ್‌ ಕೂಡ ಮಾಡಿದ್ದರು. ಈ ಟ್ವೀಟ್‌ ಪ್ರತಿಕ್ರಿಯಿಸಿರುವ ಎಲೊನ್‌ ಮಸ್ಕ್‌ ‘ಬೈಡನ್‌ ಅಮೆರಿಕನ್ನರನ್ನು ಮೂರ್ಖರಂತೆ ಕಾಣುತ್ತಿದ್ದಾರೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT