ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈವಾನ್‌ ಪರ ಅಮೆರಿಕ ಪಡೆಗಳು ನಿಲ್ಲಲಿವೆ: ಚೀನಾಗೆ ಜೋ ಬೈಡನ್‌ ಎಚ್ಚರಿಕೆ

Last Updated 19 ಸೆಪ್ಟೆಂಬರ್ 2022, 12:49 IST
ಅಕ್ಷರ ಗಾತ್ರ

ಬೀಜಿಂಗ್: ಚೀನಾವು ತೈವಾನ್‌ ಅತಿಕ್ರಮಣಕ್ಕೆ ಮುಂದಾದರೆ ಅಮೆರಿಕದ ಪಡೆಗಳು ತೈವಾನ್‌ ಪರವಾಗಿ ನಿಲ್ಲಲಿವೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಭಾನುವಾರ ಎಚ್ಚರಿಸಿದ್ದಾರೆ.

ಸಿಬಿಎಸ್‌ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಮಾತು ಹೇಳಿದ್ದಾರೆ. ಬೈಡನ್‌ ಭರವಸೆಗೆ ತೈವಾನ್‌ನ ವಿದೇಶಾಂಗ ಸಚಿವಾಲಯ ಸೋಮವಾರ ಕೃತಜ್ಞತೆ ಅರ್ಪಿಸಿದೆ.

‘ತೈವಾನ್‌ ಮತ್ತು ಚೀನಾ ನಡುವಣ ಬಿಕ್ಕಟ್ಟು ಶಾಂತಿಯುತವಾಗಿ ಬಗೆಹರಿಯಬೇಕೆಂದು ಅಮೆರಿಕ ಬಯಸುತ್ತದೆ. ಈ ವಿಷಯದಲ್ಲಿ ಅಮೆರಿಕ ನೀತಿ ಬದಲಾಗಿಲ್ಲ ಎಂದು ಶ್ವೇತಭವನ ಸ್ಪಷ್ಪಪಡಿಸಿದೆ’ ಎಂದು ಸಿಬಿಎಸ್‌ ನ್ಯೂಸ್‌ ವರದಿ ಮಾಡಿದೆ.

ಬೈಡನ್‌ ಭೇಟಿ ಉದ್ದೇಶವಿಲ್ಲ: ಇರಾನ್‌ ಅಧ್ಯಕ್ಷ

ತೆಹ್ರಾನ್‌ ವರದಿ:ವಿಶ್ವಸಂಸ್ಥೆ ಸಾಮಾನ್ಯ ಅಧಿವೇಶನದ ಸಂದರ್ಭದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರನ್ನು ಭೇಟಿ ಮಾಡುವ ಉದ್ದೇಶವಿಲ್ಲ ಎಂದು ಇರಾನ್‌ ಅಧ್ಯಕ್ಷ ಇಬ್ರಾಹಿಮ್‌ ರೈಸಿ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT