ಬುಧವಾರ, ಏಪ್ರಿಲ್ 14, 2021
25 °C

ಅಫ್ಗನ್‌ನಲ್ಲಿ ತಾಲಿಬಾನ್‌ ಆಳ್ವಿಕೆಗೆ ಬೈಡನ್ ಒಪ್ಪವುದಿಲ್ಲ: ಶ್ವೇತಭವನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್‌: ‘ಆಫ್ಗಾನಿಸ್ತಾನದಲ್ಲಿ ತಾಲಿಬಾನ್‌ ಆಡಳಿತ ನಡೆಸುವುದನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಒಪ್ಪುವುದಿಲ್ಲ ಎಂದು ಹೇಳಿರುವ ಶ್ವೇತಭವನ,  ಯುದ್ಧಪೀಡಿತವಾಗಿರುವ ಆ ದೇಶದಲ್ಲಿ ಶಾಂತಿ ನೆಲೆಸಲು ಬೇಕಾದ ಕ್ರಮ ಕೈಗೊಳ್ಳುವ ಪ್ರಕ್ರಿಯೆ ನಡೆಯುತ್ತಿರುವ ವಿಚಾರವನ್ನು ಒತ್ತಿ ಹೇಳಿದೆ.

‘ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಆಳ್ವಿಕೆ ನಡೆಸಲು ಬೈಡನ್ ಒಪ್ಪುತ್ತಾರೆಯೇ‘ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಜೆನ್‌ ಪ್ಸಕಿ, ‘ಈ ವಿಚಾರವನ್ನು ಅವರು ಬಹಶಃ ಒಪ್ಪುವುದಿಲ್ಲ. ಆದರೆ ಅಫ್ಗನ್‌ನಲ್ಲಿ ಕೈಗೊಳ್ಳಬೇಕಾದ ಮುಂದಿನ ಕ್ರಮಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಅದು ಎಲ್ಲಿಗೆ ಹೋಗಿ ತಲುಪುತ್ತದೆಯೋ ಗೊತ್ತಿಲ್ಲ‘ ಎಂದು ಹೇಳಿದರು.

ತಾಲಿಬಾನ್ ಮತ್ತು ಅಫ್ಗನ್‌ ಸರ್ಕಾರದ ನಡುವೆ ಶಾಶ್ವತ ಯುದ್ಧವಿರಾಮ ಮತ್ತು ಶಾಂತಿ ಸ್ಥಾಪನೆ ಹಾಗೂ ಕಳೆದ ವರ್ಷ ಮೇ 1 ರೊಳಗೆ ಎಲ್ಲ ವಿದೇಶಿ ರಕ್ಷಣಾ ಪಡೆಗಳನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ  ಫೆಬ್ರವರಿ 2020ರಲ್ಲಿ ಅಮೆರಿಕ ಮತ್ತು ತಾಲಿಬಾನ್‌ ಒಂದು ಒಪ್ಪಂದಕ್ಕೆ ಬಂದಿದ್ದವು. ಪ್ರಸ್ತುತ ಅಫ್ಗಾನಿಸ್ತಾನದಲ್ಲಿ 2500 ಮಂದಿ ಅಮೆರಿಕ ಸೈನಿಕರಿದ್ದಾರೆ.

2001ರಲ್ಲಿಅಮೆರಿಕದ ನೆರವಿನಿಂದ ಅಲ್ಲಿ ತಾಲಿಬಾನ್‌ ತನ್ನ ಅಧಿಕಾರವನ್ನು ಕಳೆದುಕೊಂಡಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು