ಅಮೆರಿಕ: ಸಂಸತ್ತಿನಲ್ಲಿ ‘ಒನ್ ಚೀನಾ‘ ನೀತಿ ನಿಷೇಧಿಸುವ ಮಸೂದೆ ಮಂಡನೆ

ವಾಷಿಂಗ್ಟನ್: ತೈವಾನ್ ರಾಷ್ಟ್ರದೊಂದಿಗೆ ಔಪಚಾರಿಕವಾಗಿ ರಾಜತಾಂತ್ರಿಕ ಸಂಬಂಧವನ್ನು ಪುನರಾರಂಭಿಸುವ ಮತ್ತು ಹಳೆಯ ಹಾಗೂ ಪ್ರತಿ ಉತ್ಪಾದಕ ‘ಒನ್ ಚೀನಾ‘ ನೀತಿಯನ್ನು ನಿಷೇಧಿಸುವ ಮಸೂದೆಯನ್ನು ರಿಪಬ್ಲಿಕನ್ ಪಕ್ಷದ ಹಿರಿಯ ಸದಸ್ಯರು ಅಮೆರಿಕದ ಸಂಸತ್ತಿನಲ್ಲಿ ಮಂಡಿಸಿದರು.
ರಿಪಬ್ಲಿಕನ್ ಸಂಸದರಾದ ಟಾಮ್ ಟಿಫಾನಿ ಮತ್ತು ಸ್ಕಾಟ್ ಪೆರ‍್ರಿ ಅವರು ಮಂಡಿಸಿದ ಈ ಮಸೂದೆ, ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ತೈವಾನ್‌ನ ಸದಸ್ಯತ್ವವನ್ನು ಬೆಂಬಲಿಸಲು ಮತ್ತು ಅಮೆರಿಕ- ತೈವಾನ್ ನಡುವೆ ಮುಕ್ತ ವ್ಯಾಪಾರ ಒಪ್ಪಂದವನ್ನು ರೂಪಿಸುವ ಕುರಿತು ತೈಪೆಯೊಂದಿಗೆ ಮಾತುಕತೆಗಳನ್ನು ಪ್ರಾರಂಭಿಸಲು ಬಿಡೆನ್ ಆಡಳಿತಕ್ಕೆ ನಿರ್ದೇಶನ ನೀಡುತ್ತದೆ.
ಜಿಮ್ಮಿ ಕಾರ್ಟರ್ ಅಮೆರಿಕದ ಅಧ್ಯಕ್ಷರಾಗಿದ್ದಾಗ ದಿಢೀರನೆ ತೈಪೆಯೊಂದಿಗೆ ಔಪಚಾರಿಕ ಸಂಬಂಧವನ್ನು ಕಡಿದುಕೊಂಡಿದ್ದರು. ಹೀಗಾಗಿ 1979ರವರೆಗೆ ಅಮೆರಿಕ ತೈವಾನ್‌ನೊಂದಿಗೆ ಸಾಮಾನ್ಯವಾದ ರಾಜತಾಂತ್ರಿಕ ಸಂಬಂಧವನ್ನು ಹೊಂದಿತ್ತು. ಈಗ ಆ ಸಂಬಂಧನ್ನು ಪುನರರಾರಂಭಿಸುವ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಗಿದೆ.
ತೈವಾನ್ ರಾಷ್ಟ್ರವನ್ನು, ಚೀನಾ ಬಂಡುಕೋರ ಪ್ರಾಂತ್ಯವೆಂದೇ ಪರಿಗಣಿಸುತ್ತದೆ. ಆ ದೇಶ ಮುಖ್ಯ ವಾಹಿನಿ ರಾಷ್ಟ್ರದೊಂದಿಗೆ ಸೇರಬೇಕು ಅಥವಾ ಬಲವಂತವಾಗಿಯಾದರೂ ಸೇರಿಸಬೇಕು ಎಂದು ಬಯಸುತ್ತದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.