ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ ಸೇನೆ ಬಿಟ್ಟು ಹೋಗಿದ್ದ ಹೆಲಿಕಾಫ್ಟರ್ ಪತನ: ಮೂವರು ತಾಲಿಬಾನಿಗಳ ಸಾವು

Last Updated 12 ಸೆಪ್ಟೆಂಬರ್ 2022, 6:16 IST
ಅಕ್ಷರ ಗಾತ್ರ

ಕಾಬೂಲ್: ತಾಲಿಬಾನ್ ಭದ್ರತಾ ಪಡೆಗಳು ತರಬೇತಿಗಾಗಿ ಬಳಸುತ್ತಿದ್ದ ಅಮೆರಿಕ ಸೇನೆ ಬಿಟ್ಟು ಹೋಗಿದ್ದ ಬ್ಲ್ಯಾಕ್ ಹಾಕ್ ಹೆಲಿಕಾಫ್ಟರ್ ಪತನವಾಗಿ ಇಬ್ಬರು ಪೈಲಟ್‌ಗಳು ಮೃತಪಟ್ಟಿದ್ದಾರೆ. ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಈ ಘಟನೆ ಕಾಬೂಲ್‌ನ ಡಿಫೆನ್ಸ್ ಯುನಿವರ್ಸಿಟಿಯ ವ್ಯಾಪ್ತಿಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.

ಬಹುಕೋಟಿ ಮೌಲ್ಯದ ಹಾಗೂ ಅತ್ಯಾಧುನಿಕ ಯುದ್ಧ ವಾಹನಗಳನ್ನು ಮತ್ತು ಸಲಕರಣೆಗಳನ್ನುಕಳೆದ ವರ್ಷ ಅಫ್ಗಾನಿಸ್ತಾನ ತೊರೆದು ಹೋಗುವಾಗ ಅಮೆರಿಕ ಬಿಟ್ಟು ಹೋಗಿತ್ತು. ಇದರಲ್ಲಿ 10ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್‌ಗಳೂ ಸೇರಿದ್ದವು.

ಆದರೆ, ಈ ಅತ್ಯಾಧುನಿಕ ಹೆಹೆಲಿಕಾಫ್ಟರ್‌ಗಳನ್ನು ಹಾರಿಸಲು ನುರಿತ ಸಿಬ್ಬಂದಿ ತಾಲಿಬಾನ್ ಬಳಿ ಇರದಿದ್ದಕ್ಕೆ ಮಾಜಿ ಯೋಧರ ಮಾರ್ಗದರ್ಶನ ಪಡೆದು ತಾಲಿಬಾನ್ ಕಮಾಂಡರ್ ತರಬೇತಿ ನೀಡುತ್ತಿದ್ದರು.

ಈ ವೇಳೆ ತಾಂತ್ರಿಕ ದೋಷದಿಂದ ಹೆಲಿಕಾಫ್ಟರ್ ಪತನವಾಗಿದೆ ಎಂದು ತಾಲಿಬಾನ್‌ನ ಮಿಲಿಟರಿ ವಕ್ತಾರರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT