ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗನ್ ತೊರೆಯುತ್ತಿರುವವರ ಪಾಲಿನ ‘ವಾಯುಪುತ್ರ‘ ಈ ಬೋಯಿಂಗ್ ಸಿ 17..!

Last Updated 24 ಆಗಸ್ಟ್ 2021, 13:58 IST
ಅಕ್ಷರ ಗಾತ್ರ

ಬೆಂಗಳೂರು: ತಾಲಿಬಾನಿಗಳು ಅಫ್ಗಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಆ ದೇಶವನ್ನು ತೊರೆಯಲು ಅನೇಕ ಜನ ಸಾಗರೋಪಾದಿಯಲ್ಲಿ ಕಾಬೂಲ್ ವಿಮಾನ ನಿಲ್ದಾಣದತ್ತ ತೆರಳಿದ್ದರು. ಈಗಲೂ ಕೂಡ ಜನ ದೇಶ ತೊರಿಯಲು ಪರಿತಪಿಸುತ್ತಿದ್ದಾರೆ.

ತಾಲಿಬಾನಿಗಳಿಂದ ಬೆದರಿಕೆ ಇರುವುದರಿಂದ ಅಮೆರಿಕ, ಬ್ರಿಟನ್, ಭಾರತ, ರಷ್ಯಾ, ಜರ್ಮನಿ ಸೇರಿದಂತೆ ಅನೇಕ ದೇಶಗಳು ತಮ್ಮ ದೇಶದ ನಾಗರಿಕರನ್ನು ಕರೆತರಲು ಹರಸಾಹಸ ಮಾಡುತ್ತಿವೆ. ಈ ಕೆಲಸಕ್ಕೆ ಜಂಬೋ ವಿಮಾನಗಳಾದ ಬೋಯಿಂಗ್ ಸಿ 17 ವಿಮಾನಗಳನ್ನು ಏರ್‌ ಲಿಫ್ಟ್‌ಗಾಗಿ ಬಳಸಿಕೊಳ್ಳುತ್ತಿವೆ.

ಕಾಬೂಲ್‌ನಲ್ಲಿ ನಡೆಯುತ್ತಿರುವ ಸ್ಥಳಾಂತರ ಪ್ರಕ್ರಿಯೆಯಲ್ಲಿ ಈ ಬೋಯಿಂಗ್ ಸಿ 17 ಬೃಹತ್ ವಿಮಾನಗಳು ಗಮನ ಸೆಳೆಯುತ್ತಿವೆ.

ಆ.16 ರಂದು ಅಮೆರಿಕ ತನ್ನ ಬೋಯಿಂಗ್ ಸಿ 17 ಗ್ಲೋಬ್‌ಮಾಸ್ಟರ್ 3 ವಿಮಾನದಿಂದ ಒಂದೇ ಬಾರಿಗೆ 823 ಜನರನ್ನು ಸ್ಥಳಾಂತರ ಮಾಡಿದ್ದು ದೊಡ್ಡ ಸುದ್ದಿಯಾಗಿದ್ದಲ್ಲದೇ ಬೋಯಿಂಗ್ ವಿಮಾನದ ತಾಕತ್ತನ್ನು ತೋರಿಸಿತ್ತು. ಅಲ್ಲದೇ ಭಾರತ, ಬ್ರಿಟನ್, ಜರ್ಮನಿ, ರಷ್ಯಾ ಮುಂತಾದ ದೇಶಗಳು ತಮ್ಮ ದೇಶದ ನಾಗರಿಕರನ್ನು ಕರೆ ತರಲು ತಮ್ಮ ಬಳಿ ಇರುವ ಈ ಬೋಯಿಂಗ್ ವಿಮಾನಗಳನ್ನೇ ಬಳಸಿಕೊಳ್ಳುತ್ತಿವೆ.

ಅಂದು ಆ 15 ರಂದು ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದ್ದ ದೃಶ್ಯ, ಕೆಲ ಕಾಬೂಲಿಗಳು ದೇಶ ತೊರೆಯುವ ಬರದಲ್ಲಿ ಇದೇ ವಿಮಾನದ ರೆಕ್ಕೆಯ ಕೆಳಗೆ ಕೂತು ಆಕಾಶದಿಂದ ಕೆಳಕ್ಕೆ ಬಿದ್ದಿದ್ದರು.ಜರ್ಮನಿಗೆ ತೆರಳುವಾಗ ಇದೇ ವಿಮಾನದಲ್ಲಿ ಅಫ್ಗಾನಿಸ್ತಾನದ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದರು.

ಇನ್ನು ಈ ಜಂಬೋ ವಿಮಾನ 1980 ರಲ್ಲಿ ಅಭಿವೃದ್ಧಿಯಾಯಿತು. 1990 ರಲ್ಲಿ ಮೊದಲ ಹಾರಾಟವನ್ನು ಆರಂಭಿಸಿತು. ಈ ವಿಮಾನವನ್ನು ರಷ್ಯಾ, ಭಾರತ, ಅಮೆರಿಕ, ಬ್ರಿಟನ್, ಜರ್ಮನಿ ಸೇರಿದಂತೆ ಅನೇಕ ದೊಡ್ಡ ರಾಷ್ಟ್ರಗಳು ಏರ್‌ ಲಿಫ್ಟ್ ಮಾಡಲು, ಯುದ್ದ ಸಲಕರಣೆಗಳನ್ನು ಸಾಗಿಸಲು ಬಳಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT