ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರರು– ಬೆಂಬಲಿಗರ ನಡುವಣ ಸಂಪರ್ಕ ಕಡಿತ ಅನಿವಾರ್ಯ– ಬಾಜ್ವಾ

Last Updated 13 ಫೆಬ್ರುವರಿ 2022, 11:51 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌ (ಪಿಟಿಐ):ಭಯೋತ್ಪಾದನೆಗೆ ಕಡಿವಾಣ ಹಾಕಬೇಕಾದರೆ ಉಗ್ರರು ಮತ್ತು ಅವರ ಬೆಂಬಲಿಗರ ನಡುವಿನ ಸಂಬಂಧವನ್ನು ಮುರಿಯುವುದು ಅನಿವಾರ್ಯ ಎಂದು ಪಾಕಿಸ್ತಾನದ ಸೇನಾಮುಖ್ಯಸ್ಥ ಖಮರ್‌ ಜಾವೇದ್‌ ಬಾಜ್ವಾ ಹೇಳಿದರು.

ಉಗ್ರರ ದಾಳಿಗೆ ಒಳಗಾಗಿದ್ದ ಬಲೂಚಿಸ್ತಾನದಪಂಜ್‌ಗುರ್‌ ಪ್ರಾಂತ್ಯಕ್ಕೆ ಭೇಟಿನೀಡಿದ ಅವರು, ಉಗ್ರರೊಡನೆ ಹೋರಾಡಿದ ಸೈನಿಕರೊಂದಿಗೆ ಮಾತುಕತೆ ನಡೆಸಿದರು.

ಈ ಪ್ರದೇಶವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿಗೊಳಿಸಲು ನಾವು ಬದ್ಧವಾಗಿದ್ದೇವೆ ಎಂದು ಭರವಸೆ ನೀಡಿದ ಬಜ್ವಾ, ಬಲೂಚಿಸ್ತಾನವನ್ನು ಅಸ್ಥಿರಗೊಳಿಸುತ್ತಿರುವ ವಿರೋಧಿ ಶಕ್ತಿಗಳ ಯೋಜನೆಯನ್ನು ವಿಫಲಗೊಳಿಸಲು ಹಾಗೂಸ್ಥಳೀಯರ ರಕ್ಷಣೆ ಖಚಿತಪಡಿಸಿಕೊಳ್ಳಲು ಸೇನೆಯಿಂದ ಉನ್ನತ ಮಟ್ಟದ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದರು.

ಭಯೋತ್ಪಾದಕರ ದಾಳಿ ಎದುರಿಸಿದ್ದ ನೌಶಕಿಪ್ರಾಂತ್ಯಕ್ಕೆ ಕಳೆದ ವಾರ ಪ್ರಧಾನಿ ಇಮ್ರಾನ್‌ ಖಾನ್‌ ಅವರೊಂದಿಗೆಬಜ್ವಾ ಭೇಟಿ ನೀಡಿದ್ದರು.ಪಂಜ್‌ಗುರ್‌ ಮತ್ತು ನೌಶಕಿ ಪ್ರಾಂತ್ಯದಲ್ಲಿ ಭಯೋತ್ಪಾದಕರುನಡೆಸಿದ ದಾಳಿಯಲ್ಲಿ 20 ಉಗ್ರರು ಹಾಗೂ ಒಂಬತ್ತು ಪಾಕ್‌ ಯೋಧರು ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT