ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video: ಉದ್ಘಾಟನೆಯಾದ ಬೆನ್ನಲ್ಲೇ ಕುಸಿದು ಬಿದ್ದ ಕಾಲುಸೇತುವೆ

ಹಳ್ಳಕ್ಕೆ ಬಿದ್ದ ಅಧಿಕಾರಿಗಳು, ಪತ್ರಕರ್ತರು
ಅಕ್ಷರ ಗಾತ್ರ

ನೀರಿನ ಹರಿವಿರುವ ತೊರೆಯನ್ನು ದಾಟಲು ಕಟ್ಟಿದ್ದ ಹೊಸ ಕಾಲುಸೇತುವೆಯು ಉದ್ಘಾಟನೆಯಾದ ಕ್ಷಣದಲ್ಲೇ ಕುಸಿದ್ದು ಬಿದ್ದ ಘಟನೆ ಮೆಕ್ಸಿಕೊದಲ್ಲಿ ನಡೆದಿದೆ. ಉದ್ಘಾಟನೆ ಮಾಡಿ ಅದರ ಮೇಲೆ ಸಾಗುತ್ತಿರುವಾಗಲೇ ಕಾಲುಸಂಕ ಕುಸಿದು ಮೇಯರ್‌ ಮತ್ತು 20ಕ್ಕೂ ಹೆಚ್ಚು ಜನರು ತೊರೆಗೆ ಉರುಳಿದರು. ವರದಿಗಳ ಪ್ರಕಾರ, ಘಟನೆಯಲ್ಲಿ ಎಂಟಕ್ಕೂ ಹೆಚ್ಚು ಮಂದಿ ಮೂಳೆ ಮುರಿದುಕೊಂಡಿದ್ದಾರೆ.

ಸ್ಥಳೀಯ ನಗರಾಡಳಿತವು ಹೊರಡಿಸಿರುವ ಪ್ರಕಟಣೆಯಲ್ಲಿ ನಗರದ ನಾಲ್ವರು ಕೌನ್ಸಿಲ್‌ ಸದಸ್ಯರು, ಇಬ್ಬರು ಅಧಿಕಾರಿಗಳು ಹಾಗೂ ಒಬ್ಬರು ಸ್ಥಳೀಯ ವರದಿಗಾರರು ಗಾಯಗೊಂಡಿರುವುದಾಗಿ ತಿಳಿಸಿದೆ. ಈ ಕುರಿತು ಎನ್‌ಡಿಟಿವಿ ವರದಿ ಮಾಡಿದೆ.

ಉದ್ಘಾಟನೆಯಾದ ಕಾಲುಸಂಕದ ಮೇಲೆ ಜನರು ಖುಷಿಯಿಂದ ಸಾಗುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ಸುಮಾರು ಇಪ್ಪತ್ತು ಜನರು ಸೇತುವೆಯ ಮೇಲೆ ನಡೆಯುತ್ತಿದ್ದಂತೆ ಕುಸಿದು ಬಿದ್ದಿರುವುದು ದಾಖಲಾಗಿದೆ. ಸುಮಾರು 10 ಅಡಿಗಳನ್ನು ಕೆಳಗೆ ಕಲ್ಲುಗಳು, ಬಂಡೆಗಳು ಹಾಗೂ ಹರಿಯುತ್ತಿರುವ ನೀರಿಗೆ ಬಿದ್ದಿದ್ದಾರೆ.

ಲೋಹದ ಸರಪಳಿಗಳು ಹಾಗೂ ಮರದ ಹಲಗೆಗಳಿಂದ ತೂಗು ಸೇತುವೆಯನ್ನು ಮರುವಿನ್ಯಾಸಗೊಳಿಸಲಾಗಿತ್ತು. 'ಸೇತುವೆ ಉದ್ಘಾಟಿಸಿ, ಅದರ ಮೇಲೆ ನಡೆಯುವುದಕ್ಕೂ ಮುನ್ನ ಕೆಲವು ಮಂದಿ ಅದರ ಮೇಲೆ ಕುಣಿಯುತ್ತಿದ್ದರು. ಅಧಿಕಾರಿಗಳು ಹಾಗೂ ಮಾಧ್ಯಮ ಪ್ರತಿನಿಧಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು, ಅದು ಸೇತುವೆಯ ಸಾಮರ್ಥ್ಯವನ್ನು ಮೀರಬಹುದು' ಎಂದು ಮೇಯರ್‌ ಜೋಸ್‌ ಲೂಯಿಸ್‌ ಅಭಿಪ್ರಾಯ ಪಟ್ಟಿದ್ದಾರೆ.

ಕ್ವರ್ನವಾಕಾ ನಗರದ ನೈಸರ್ಗಿಕ ಸೊಬಗನ್ನು ಪುನಶ್ಚೇಚನಗೊಳಿಸುವ ನಿಟ್ಟಿನಲ್ಲಿ ಸರ್ಕಾರವು 'ನದಿ ಭಾಗದ ನಡಿಗೆ' ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅದರ ಭಾಗವಾಗಿ ಕಾಲುಸಂಕ ನಿರ್ಮಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT