ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಜತೆಗೆ ರಕ್ಷಣಾ ಸಹಭಾಗಿತ್ವ ಮತ್ತಷ್ಟು ಗಾಢ: ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌

Last Updated 5 ಫೆಬ್ರುವರಿ 2023, 13:05 IST
ಅಕ್ಷರ ಗಾತ್ರ

ಲಂಡನ್‌: ಭಾರತದ ಜತೆಗೆ ವ್ಯಾಪಾರ, ರಕ್ಷಣಾ ವಲಯ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಗಾಢಗೊಳಿಸಲು ಬ್ರಿಟನ್‌ ಸರ್ಕಾರದ ಸಂಪೂರ್ಣ ಬೆಂಬಲವಿದೆ ಎಂದು ಪ್ರಧಾನಿ ರಿಷಿ ಸುನಕ್‌ ಬಲವಾಗಿ ಪ್ರತಿಪಾದಿಸಿದ್ದಾರೆ.

ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ಮತ್ತು ಬ್ರಿಟನ್‌ ಭದ್ರತಾ ಸಲಹೆಗಾರ ಸರ್‌ ಟಿಮ್‌ ಬಾರೊ ಅವರ ನಡುವೆ ಬ್ರಿಟನ್ ಸಂಸತ್‌ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಪ್ರಧಾನಿ ರಿಷಿ ಸುನಕ್‌ ವಿಶೇಷ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ವಾಷಿಂಗ್ಟನ್‌ನಲ್ಲಿ ಅಮೆರಿಕದ ರಕ್ಷಣಾ ಸಲಹೆಗಾರ ಜೇಕ್ ಸುಲ್ಲಿವಾನ್ ಜತೆಗಿನ ದ್ವಿಪಕ್ಷೀಯ ಮಾತುಕತೆ ಮುಗಿಸಿಕೊಂಡು ವಾಪಸಾಗುವಾಗ ಡೊಭಾಲ್‌ ಅವರು ಲಂಡನ್‌ನಲ್ಲೂ ಟಿಮ್‌ ಬಾರೊ ಜತೆಗೆ ದ್ವಿಪಕ್ಷೀಯ ಕಾರ್ಯತಂತ್ರದ ವಾರ್ಷಿಕ ಮಾತುಕತೆ ನಡೆಸಿದರು.

ಭದ್ರತಾ ಕಾರ್ಯತಂತ್ರದ ‍ಸಹಭಾಗಿತ್ವದ ಕುರಿತ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದ ದ್ವಿಪಕ್ಷೀಯ ಸಭೆಯಲ್ಲಿ ರಿಷಿ ಸುನಕ್‌ ಅವರು ವಿಶೇಷ ಅತಿಥಿಯಾಗಿ ಭಾಗವಹಿಸಿರುವುದನ್ನು ಉಲ್ಲೇಖಿಸಿ ಲಂಡನ್‌ನಲ್ಲಿನ ಭಾರತೀಯ ಹೈಕಮಿಷನ್‌ ಮತ್ತು ವಿದೇಶಾಂಗ ವ್ಯವಹಾರ ಸಚಿವಾಲಯ ಟ್ವೀಟ್‌ ಮಾಡಿದೆ.

‘ಪ್ರಮುಖ ಕ್ಷೇತ್ರಗಳಲ್ಲಿ ಉಭಯ ರಾಷ್ಟ್ರಗಳ ಕಾರ್ಯತಂತ್ರದ ಸಹಭಾಗಿತ್ವ ಮತ್ತಷ್ಟು ಗಾಢಗೊಳಿಸಲು ಸರ್ಕಾರ ಸಂಪೂರ್ಣ ಬೆಂಬಲ ನೀಡುವ ಭರವಸೆಯನ್ನು ರಿಷಿ ಸುನಕ್‌ ಕೊಟ್ಟಿದ್ದಾರೆ. ದ್ವಿಪಕ್ಷೀಯ ಕಾರ್ಯತಂತ್ರದ ಸಹಭಾಗಿತ್ವವನ್ನು ಎಲ್ಲ ಕ್ಷೇತ್ರಗಳಿಗೂ ವಿಸ್ತರಿಸಲು ಉಭಯತ್ರರು ಸಮ್ಮತಿಸಿದರು. ಸರ್ ಟಿಮ್ ಅವರು ಮಾತುಕತೆಗಾಗಿ ಭಾರತಕ್ಕೆ ಶೀಘ್ರವೇ ಪ್ರವಾಸ ಕೈಗೊಳ್ಳಬಹುದು’ ಎಂದು ಟ್ವೀಟ್‌ನಲ್ಲಿ ಹೇಳಿದೆ.

ಪ್ರಧಾನಿ ಮೋದಿ ಅವರ ಬಗ್ಗೆ ವಿವಾದಿತ ಸಾಕ್ಷ್ಯಚಿತ್ರವನ್ನು ಬಿಬಿಸಿ ನಿರ್ಮಿಸಿ, ಎರಡು ಕಂತುಗಳಲ್ಲಿ ಪ್ರಸಾರ ಮಾಡಿತ್ತು. ಇದರಿಂದ ಭಾರತದ ಪ್ರಜೆಗಳು ಮತ್ತು ಬ್ರಿಟನ್‌ನಲ್ಲಿರುವ ಭಾರತೀಯ ವಲಸೆಗಾರರಿಂದ ತೀವ್ರ ವಿರೋಧ ಹಾಗೂ ವ್ಯಾಪಕ ಟೀಕೆ ವ್ಯಕ್ತವಾಯಿತು. ಇದರ ಬೆನ್ನಲ್ಲೇ ಉಭಯತ್ರರ ನಡುವೆ ಕಾರ್ಯತಂತ್ರದ ಸಹಭಾಗಿತ್ವ ಸಭೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT