ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫ್ಗನ್‌ ನಿರಾಶ್ರಿತರ ಪುನರ್ವಸತಿಗೆ ₹121 ಕೋಟಿ ಕೇಳಿದ ಕ್ಯಾಲಿಫೋರ್ನಿಯಾ ಗವರ್ನರ್

Last Updated 4 ಸೆಪ್ಟೆಂಬರ್ 2021, 6:24 IST
ಅಕ್ಷರ ಗಾತ್ರ

ಸ್ಯಾಕ್ರಮೆಂಟೊ (ಅಮೆರಿಕ): ಕ್ಯಾಲಿಫೋರ್ನಿಯಾ ರಾಜ್ಯದಲ್ಲಿರುವ ಅಫ್ಗನ್‌ ನಿರಾಶ್ರಿತರಿಗೆ ಪುನರ್ವಸತಿ ಕಲ್ಪಿಸಲು ₹121.9 ಕೋಟಿ (16.7 ಮಿಲಿಯನ್‌ ಡಾಲರ್‌) ಪೂರೈಸುವಂತೆ ಕ್ಯಾಲಿಫೋರ್ನಿಯಾ ಗವರ್ನರ್‌ ಹಾಗೂ ಚುನಾಯಿತ ಪ್ರತಿನಿಧಿಗಳು ಮನವಿ ಮಾಡಿದ್ದಾರೆ.

ಅಫ್ಗಾನಿಸ್ತಾನ ತಾಲಿಬಾನ್‌ ಕೈವಶವಾದ ಬಳಿಕ ನಿರಾಶ್ರಿತ ಅಫ್ಗನ್ನರು ಅಮೆರಿಕಕ್ಕೆ ಬರುತ್ತಿದ್ದಾರೆ. ಅವರಿಗೆ ನೆರವು ಒದಗಿಸಲು ಕ್ಯಾಲಿಫೋರ್ನಿಯಾ ಸಿದ್ಧವಾಗಿದೆ. ಈ ಉದ್ದೇಶಕ್ಕೆ ಸಾಮಾನ್ಯ ನಿಧಿಯ ಹಣವನ್ನು ಬಳಸಲು ಅನುಮತಿ ನೀಡುವಂತೆ ಗವರ್ನರ್‌ ಗ್ಯಾವಿನ್‌ ನ್ಯೂಸಮ್‌ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಮುಂದಿನ ವಾರ ಅಧಿವೇಶನ ನಡೆಯಲಿದ್ದು, ನ್ಯೂಸಮ್‌ ಅವರ ಈ ಮನವಿಯನ್ನು ಸೆನೆಟ್‌ನ ಹಂಗಾಮಿ ಅಧ್ಯಕ್ಷ ಟೋನಿ ಅಟ್ಕಿನ್ಸ್‌ ಮತ್ತು ಸ್ಪೀಕರ್‌ ಆ್ಯಂಟೊನಿ ರೆಂಡನ್‌ ಅವರು ಪರಿಗಣಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

‘ಅಫ್ಗನ್‌ ನಿರಾಶ್ರಿತರು ವಿಶೇಷ ವೀಸಾ ಹೊಂದಿಲ್ಲ. ಮಾನವೀಯತೆ ಆಧಾರದ ಮೇಲೆ ಅಮೆರಿಕದಲ್ಲಿ ಉಳಿಯಲು ಅವರಿಗೆ ಅವಕಾಶ ನೀಡಲಾಗಿದೆ. ಹೀಗಾಗಿ, ನಿರಾಶ್ರಿತರಿಗೆ ಸಂಬಂಧಿಸಿದ ನಿಯಮಗಳ ಪ್ರಕಾರ ಯಾವುದೇ ಸವಲತ್ತುಗಳನ್ನು ಪಡೆಯಲು ಅವರು ಅರ್ಹರಲ್ಲ. ಆದರೆ, ಅವರಿಗೆ ನಗದು ಹಣ ನೀಡಿ, ನೆರವು ಒದಗಿಸಲಾಗುವುದು’ ಎಂದು ನ್ಯೂಸಮ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT