ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಲಂಕಾ: ವಾರದ ಲೆಕ್ಕದಲ್ಲಿ ಇಂಧನ ಪಡಿತರ ಘೋಷಣೆ

ಶ್ರೀಲಂಕಾದಲ್ಲಿ ಇನ್ನಷ್ಟು ಬಿಗಡಾಯಿಸಿದ ಇಂಧನ ಬಿಕ್ಕಟ್ಟು
Last Updated 12 ಜೂನ್ 2022, 13:22 IST
ಅಕ್ಷರ ಗಾತ್ರ

ಕೊಲಂಬೊ: ವಿದೇಶಿ ವಿನಿಮಯದ ಬಿಕ್ಕಟ್ಟಿನಿಂದ ತೈಲ ಕೊರತೆ ಎದುರಿಸುತ್ತಿರುವ ಶ್ರೀಲಂಕಾ ಸರ್ಕಾರ, ವಾರಕ್ಕೆ ಇಂತಿಷ್ಟೇ ಎಂಬ ಪಡಿತರ ವ್ಯವಸ್ಥೆಯೊಂದಿಗೆ ಇಂಧನವನ್ನು ಗ್ರಾಹಕರಿಗೆ ಒದಗಿಸಲು ಮುಂದಾಗಿದೆ.

ಜುಲೈ ಮೊದಲ ವಾರದಿಂದ ಇದು ಜಾರಿಗೆ ಬರಲಿದೆ.ವಾಹನಗಳ ಮಾಲೀಕರಿಗೆ ವಾರಕ್ಕೆ ಎಷ್ಟು ಪ್ರಮಾಣದ ಇಂಧನ ಖರೀದಿಗೆ ಅವಕಾಶ ನೀಡಲಾಗುತ್ತದೆ ಎಂಬ ಮಾಹಿತಿಯನ್ನು ಸರ್ಕಾರ ಬಹಿರಂಗಪಡಿಸಿಲ್ಲ.

‘ಸರ್ಕಾರಿ ಸ್ವಾಮ್ಯದ ಗೆಯ್‌ಲಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಇಂಧನ ಆಮದಿಗೆ ಅಗತ್ಯವಿರುವ ಹಣಕಾಸಿನ ಸಮಸ್ಯೆ ಎದುರಿಸುತ್ತಿದೆ. ಹಣಕಾಸಿನ ಪರಿಸ್ಥಿತಿ ಬಲಪಡಿಸುವವರೆಗೆ ನಮ್ಮಲ್ಲಿ ಅನ್ಯ ಆಯ್ಕೆಗಳೇ ಇಲ್ಲ. ಆದರೆ, ಗ್ರಾಹಕರ ಹೆಸರುಗಳನ್ನು ನೋಂದಾಯಿಸಿಕೊಂಡು, ವಾರದಲ್ಲಿ ಇಂತಿಷ್ಟು ಪ್ರಮಾಣದ ಇಂಧನ ಖಾತ್ರಿ ನೀಡಲಾಗುತ್ತದೆ’ ಎಂದುಇಂಧನ ಸಚಿವ ಕಾಂಚನಾ ವಿಜೆಸೇಕೆರಾ ತಿಳಿಸಿದ್ದಾರೆ.

ದೇಶದಲ್ಲಿ ವಿದ್ಯುತ್ ಮತ್ತು ಎಲ್‌ಪಿಜಿ ಅನಿಲದ ಕೊರತೆಯೂ ಅಧಿಕವಾಗಿದೆ. ಹೀಗಾಗಿ ಪೆಟ್ರೋಲ್‌ ಬಂಕ್‌ಗಳಿಗೆ ಜನರು ಅಧಿಕವಾಗಿ ಬರತೊಡಗಿದ್ದು, ಮೈಲುದ್ದಕ್ಕೆ ವಾಹನಗಳು, ಕ್ಯಾನ್‌ ಹಿಡಿದುಕೊಂಡ ಜನರು ಸರದಿಯಲ್ಲಿ ನಿಲ್ಲುವಂತಾಗಿದೆ. ಏಪ್ರಿಲ್ ತಿಂಗಳ ಮಧ್ಯಭಾಗದಿಂದೀಚೆಗೆ ಪೆಟ್ರೋಲ್‌ ಬಂಕ್‌ಗಳಲ್ಲಿ ದ್ವಿಚಕ್ರ ವಾಹನಗಳಿಗೆ ಗರಿಷ್ಠ 4 ಲೀಟರ್‌, ತ್ರಿಚಕ್ರ ವಾಹನಗಳಿಗೆ 5 ಲೀಟರ್‌, ಕಾರು/ ಎಸ್‌ಯುವಿಗಳಿಗೆ 19.5 ಲೀಟರ್ ಇಂಧನ ನೀಡುವ ವ್ಯವಸ್ಥೆ ಜಾರಿಗೆ ಬಂದಿದೆ. ಆದರೆ ಗ್ರಾಹಕರು ಮತ್ತೆ ಮತ್ತೆ ಬಂಕ್‌ಗಳಿಗೆ ಬಂದು ಇಂಧನ ಸಂಗ್ರಹಿಸಿ ಇಡಲು ಮುಂದಾಗಿದ್ದರು. ಈ ಅವ್ಯವಸ್ಥೆಯನ್ನು ತಡೆಗಟ್ಟುವ ಸಲುವಾಗಿ ಈ ಪಡಿತರ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT