ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ: ತುರ್ತು ಸಂದರ್ಭದಲ್ಲಿ ಬಳಕೆ–ಹೊಸ ಲಸಿಕೆಗೆ ಅನುಮೋದನೆ

Last Updated 16 ಮಾರ್ಚ್ 2021, 6:47 IST
ಅಕ್ಷರ ಗಾತ್ರ

ತೈಪೆ (ತೈವಾನ್‌):ಹೊಸ ಕೋವಿಡ್‌–19 ಲಸಿಕೆಯನ್ನು ತುರ್ತು ಸಂದರ್ಭಗಳಲ್ಲಿ ಬಳಸಲು ಚೀನಾ ಅನುಮೋದನೆ ನೀಡಿದೆ.

ತುರ್ತು ಬಳಕೆಗೆ ಚೀನಾ ಅನುಮೋದಿಸಿರುವ ನಾಲ್ಕನೇ ಲಸಿಕೆ ಇದಾಗಿದೆ. ಚೀನಾದ ಸೆಂಟರ್‌ ಫಾರ್ ಡಿಸೀಜ್‌ ಕಂಟ್ರೋಲ್‌ನ ಮುಖ್ಯಸ್ಥ ಗಾವೊ ಫು ನೇತೃತ್ವದ ತಂಡ ಪ್ರೊಟೀನ್‌ ಆಧಾರಿತ ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ ಎಂದು ಚೈನೀಸ್‌ ಅಕಾಡೆಮಿ ಆಫ್‌ ಸೈನ್ಸಸ್‌ನ ಇನ್ಸ್‌ಟಿಟ್ಯೂಟ್‌ ಆಫ್‌ ಮೈಕ್ರೋಬಯೊಲಜಿ ಪ್ರಕಟಣೆ ತಿಳಿಸಿದೆ.

ಈ ಲಸಿಕೆಯ ಕೊನೆಯ ಹಂತದ ಟ್ರಯಲ್‌ ಉಜ್ಬೇಕಿಸ್ತಾನ, ಪಾಕಿಸ್ತಾನ ಹಾಗೂ ಇಂಡೊನೇಷ್ಯಾದಲ್ಲಿ ನಡೆಯುತ್ತಿದೆ.

ಜಗತ್ತಿನ ಪ್ರಮುಖ ವೈಜ್ಞಾನಿಕ ನಿಯತಕಾಲಿಕಗಳಲ್ಲಿ ಈ ಲಸಿಕೆಯ ಕ್ಲಿನಿಕಲ್‌ ಟ್ರಯಲ್‌ ಕುರಿತ ಅಧ್ಯಯನ ವರದಿಗಳು ಪ್ರಕಟವಾಗಿವೆ. ಆದರೆ, ಲಸಿಕೆಯ ಕಾರ್ಯಕ್ಷಮತೆ ಹಾಗೂ ಸುರಕ್ಷತೆ ಕುರಿತಂತೆ ಯಾವುದೇ ಮಾಹಿತಿ ಈ ವರದಿಗಳಲ್ಲಿ ಇಲ್ಲ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT