ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆರೆ ದೇಶಗಳಿಗೆ ಮುಂದುವರಿದ ಚೀನಾ ಬೆದರಿಕೆ: ಪೆಂಟಗನ್

Last Updated 26 ಅಕ್ಟೋಬರ್ 2021, 6:41 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಚೀನಾ ತನ್ನ ರಾಷ್ಟ್ರೀಯ ಭದ್ರತೆ ಅಥವಾ ಆರ್ಥಿಕ ಹಿತಾಸಕ್ತಿಗಳಿಗೆ ಅನುಗುಣವಾಗಿ ನಡೆದುಕೊಳ್ಳುವಂತೆ ನೆರೆಹೊರೆಯ ದೇಶಗಳನ್ನು ಬೆದರಿಸುತ್ತಿದೆ ಎಂದು ಪೆಂಟಗನ್ ದೂರಿದೆ.

ಪೆಂಟಗನ್ ಪತ್ರಿಕಾ ಕಾರ್ಯದರ್ಶಿ ಜಾನ್ ಕಿರ್ಬಿ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದರು.

‘ಚೀನಾದ ಈ ವರ್ತನೆಯು ಇಂಡೊ– ಪೆಸಿಫಿಕ್‌ನ ಮುಕ್ತ ವಾತಾವರಣಕ್ಕೆ ಪೂರಕವಾಗಿರುತ್ತದೆ ಎಂದು ನಾವು ಭಾವಿಸುವುದಿಲ್ಲ’ ಎಂದು ಅವರು ಹೇಳಿದರು.

ಈ ಪ್ರದೇಶದಲ್ಲಿ ಎದುರಾಗಬಹುದಾದ ಭದ್ರತಾ ಸವಾಲುಗಳನ್ನು ಎದುರಿಸಲು, ತನ್ನ ಮೈತ್ರಿ ರಾಷ್ಟ್ರಗಳು ಮತ್ತು ಪಾಲುದಾರರು ರಕ್ಷಣಾ ಸಾಮರ್ಥ್ಯವನ್ನು ಹೊಂದಿದ್ದಾರೆ. ಈ ನಿಟ್ಟಿನಲ್ಲಿ ಬೈಡನ್‌ ಆಡಳಿತ ಶ್ರಮಿಸುತ್ತಿದೆ ಎಂದರು.

‘ಭಾರತ- ಚೀನಾ ಗಡಿಯಲ್ಲಿನ ಉದ್ವಿಗ್ನತೆಯ ಬಗ್ಗೆ ಅಮೆರಿಕ ಖಂಡಿತವಾಗಿಯೂ ಗಮನಹರಿಸುತ್ತದೆ’ ಎಂದು ಅವರು ಇದೇ ವೇಳೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಎರಡೂ ದೇಶಗಳ ನಡುವೆ ಹಿಂದಿಗಿಂತ ಹೆಚ್ಚು ಉದ್ವಿಗ್ನತೆ ಅಥವಾ ಹೆಚ್ಚು ಹಿಂಸಾತ್ಮಕವಾಗಿ ಇರುವುದನ್ನು ಯಾರೂ ನೋಡ ಬಯಸುವುದಿಲ್ಲ. ಭಾರತೀಯ ಅಧಿಕಾರಿಗಳು ಈ ಉದ್ವಿಗ್ನ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಬಯಸುತ್ತೇನೆ. ಈ ನಿಟ್ಟಿನಲ್ಲಿ ಸಂಬಂಧಿಸಿದವರ ಜತೆಗೆ ಮಾತುಕತೆ ನಡೆಸುತ್ತೇನೆ’ ಎಂದು ಅವರು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT