ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚತುಷ್ಕೋನ ಸಭೆ: ಚೀನಾ ಟೀಕೆ

Last Updated 30 ಸೆಪ್ಟೆಂಬರ್ 2020, 1:49 IST
ಅಕ್ಷರ ಗಾತ್ರ

ಬೀಜಿಂಗ್‌: ಮುಂಬರುವ ಭಾರತ, ಆಸ್ಟ್ರೇಲಿಯಾ, ಜಪಾನ್‌ ಮತ್ತು ಅಮೆರಿಕದ ವಿದೇಶಾಂಗ ಸಚಿವರ ಚತುಷ್ಕೋನ ಭದ್ರತಾ ಸಭೆಯ ಬಗ್ಗೆ ಚೀನಾ ಟೀಕೆ ವ್ಯಕ್ತಪ‍ಡಿಸಿದೆ.

ಅಕ್ಟೋಬರ್‌ 6ರಂದು ಟೋಕಿಯೊದಲ್ಲಿ ನಿಗದಿಯಾಗಿರುವ ಈ ಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಪಾಲ್ಗೊಳ್ಳಲಿದ್ದಾರೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.

‘ಜೈಶಂಕರ್‌ ಅವರು ಅ.6 ಮತ್ತು 7ರಂದು ಟೋಕಿಯೊ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ಜಪಾನ್‌ನ ವಿದೇಶಾಂಗ ಸಚಿವ ತೋಶಿಮಿತ್ಸು ಮೊಟೆಗಿ ಅವರನ್ನು ಭೇಟಿಯಾಗಿ ಉಭಯ ರಾಷ್ಟ್ರಗಳ ನಡುವಣ ದ್ವಿಪಕ್ಷೀಯ ಸಂಬಂಧ ಬಲ‍ಪಡಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸುವ ಸಾಧ್ಯತೆ ಇದೆ’ ಎಂದೂ ಪ್ರಕಟಣೆ ಹೇಳಿದೆ.

‘ಬಹುಪಕ್ಷೀಯ ಸಹಕಾರವು ಮುಕ್ತ, ಅಂತರ್ಗತ ಮತ್ತು ಪಾರದರ್ಶಕವಾಗಿರಬೇಕು. ಯಾರೂ ವಿಶೇಷ ಗುಂಪುಗಳನ್ನು ರಚಿಸಿಕೊಳ್ಳಬಾರದು’ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್‌ ವೆನ್‌ಬಿನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT