ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದ ಕೆಲವು ನಗರಗಳಲ್ಲಿ ಲಾಕ್‌ಡೌನ್‌ ಸಡಿಲಿಕೆ

Last Updated 1 ಡಿಸೆಂಬರ್ 2022, 12:48 IST
ಅಕ್ಷರ ಗಾತ್ರ

ಬೀಜಿಂಗ್‌: ಚೀನಾದ ಆಡಳಿತರೂಢ ಕಮ್ಯುನಿಸ್ಟ್‌ ಪಕ್ಷವು (ಸಿಪಿಸಿ) ತನ್ನ ಪ್ರಮುಖ ನಾಯಕ ಜಿಯಾಂಗ್‌ ಜೆಮಿನ್‌ ಅವರ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ದೇಶದ ಬಹುತೇಕ ನಗರಗಳಲ್ಲಿ ಕೋವಿಡ್‌ ವಿರುದ್ಧದ ಕಠಿಣ ಲಾಕ್‌ಡೌನ್‌ ಸಡಿಲಿಸಲಾಗಿದೆ. ದೇಶದಲ್ಲಿ ಎಲ್ಲಿಯೂ ಪ್ರತಿಭಟನೆಗಳು ನಡೆಯದಂತೆ ತಡೆಯಲು ಚೀನಿ ಪೊಲೀಸರು ಪ್ರತಿ ರಸ್ತೆ, ಬೀದಿಗಳಲ್ಲಿ ಗಸ್ತು ತಿರುಗಿದರು.

ಜನರ ಪ್ರತಿಭಟನೆ ಹತ್ತಿಕ್ಕಲು ದಕ್ಷಿಣ ಗ್ವಾನ್‌ಜೊ, ಉತ್ತರ ಶಿಜಿಯಾಜ್‌ವಾಂಗ್, ನೈರುತ್ಯ ಚೆಂಗ್ಡು ಮತ್ತು ಇನ್ನಿತರ ಪ್ರಮುಖ ನಗರಗಳಲ್ಲಿ ಕೋವಿಡ್‌ಪರೀಕ್ಷೆಯ ಅವಶ್ಯಕತೆಗಳು ಮತ್ತು ಜನರ ಓಡಾಟದ ಮೇಲಿನ ನಿಯಂತ್ರಣ ಸಡಿಲಗೊಳಿಸುವುದಾಗಿ ಘೋಷಿಸಲಾಗಿದೆ. ಕೆಲವು ಪ್ರದೇಶಗಳಲ್ಲಿ ಮಾರುಕಟ್ಟೆಗಳು ತೆರೆದವು. ಜತೆಗೆಬಸ್ ಸೇವೆಗಳು ಪುನರಾರಂಭವಾದವು.

ಪ್ರಮುಖ ನಗರಗಳಲ್ಲಿ ಕಳೆದ ವಾರಾಂತ್ಯ ಕಠಿಣ ಲಾಕ್‌ಡೌನ್‌ ಹೇರಿ, ಲಕ್ಷಾಂತರ ಜನರು ತಮ್ಮ ಮನೆಯಿಂದ ಹೊರಬರದಂತೆ ನಿರ್ಬಂಧಿಸಲಾಗಿತ್ತು. ಇದರಿಂದ ವ್ಯಾಪಕ ಪ್ರತಿಭಟನೆಗೆ ಸಾಕ್ಷಿಯಾಗಿದ್ದಶಾಂಘೈ, ಬೀಜಿಂಗ್‌ ಹಾಗೂ ಇತರ ಆರು ನಗರಗಳನ್ನು ನಿರ್ಬಂಧ ಸಡಿಲಗೊಳಿಸಿದ ಪಟ್ಟಿಯಲ್ಲಿ ಸೇರಿಸಿಲ್ಲ. ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರ ರಾಜೀನಾಮೆಗೆ ಒತ್ತಾಯಿಸಿ ಜನಾಕ್ರೋಶ ಸ್ಫೋಟಗೊಂಡ ನಂತರ, ಜನರ ಕೋಪ ಶಮನಕ್ಕೆ ಸರ್ಕಾರ ಈ ಕ್ರಮಗಳನ್ನು ಕೈಗೊಂಡಿದೆ ಎಂದು ಹೇಳಲಾಗಿದೆ.

ದೇಶದಲ್ಲಿ ಕೋವಿಡ್‌ ಹೊಸ ಪ್ರಕರಣಗಳ ಸಂಖ್ಯೆ ಕೊಂಚ ತಗ್ಗುತ್ತಿದ್ದು,ಗುರುವಾರ 36,061 ಹೊಸ ಪ್ರಕರಣಗಳು ವರದಿಯಾಗಿವೆ. ಈ ಪೈಕಿ 31,911 ಪ್ರಕರಣಗಳು ರೋಗ ಲಕ್ಷಣ ರಹಿತವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT