ಗುರುವಾರ , ಜುಲೈ 7, 2022
23 °C

ಚೀನಾದಲ್ಲಿ ಪತನಗೊಂಡಿದ್ದ ವಿಮಾನದ ಎರಡನೇ ಬ್ಲ್ಯಾಕ್‌ಬಾಕ್ಸ್ ಪತ್ತೆ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೀಜಿಂಗ್: ಚೀನಾದ ದಕ್ಷಿಣ ಭಾಗದ ಗುಡ್ಡಗಾಡು ಪ್ರದೇಶದಲ್ಲಿ ಇತ್ತೀಚೆಗೆ ಪತನಗೊಂಡಿದ್ದ ವಿಮಾನದ ಎರಡನೇ ಬ್ಲ್ಯಾಕ್‌ಬಾಕ್ಸ್ ಪತ್ತೆಯಾಗಿದೆ ಎಂದು ಮಾಧ್ಯಮಗಳು ಭಾನುವಾರ ವರದಿ ಮಾಡಿವೆ.

'ಚೀನಾ ಈಸ್ಟರ್ನ್‌ ಏರ್‌ಲೈನ್ಸ್‌ನ 'ಬೋಯಿಂಗ್‌ 737–800' ವಿಮಾನದ ಎರಡನೇ ಬ್ಲ್ಯಾಕ್‌ಬಾಕ್ಸ್ ಮಾರ್ಚ್‌ 27 ರಂದು ಪತ್ತೆಯಾಗಿದೆ' ಎಂದು 'ಕ್ಸಿನುವಾ' ಸುದ್ದಿಸಂಸ್ಥೆ ವರದಿ ಮಾಡಿದೆ.

ಈ ವಿಮಾನದ ಒಂದು ಬ್ಲಾಕ್‌ಬಾಕ್ಸ್ ಮತ್ತು ಪೈಲಟ್ ಕೊಠಡಿಯ ರೆಕಾರ್ಡರ್ ಬುಧವಾರ (ಮಾ.23) ರಂದು ಪತ್ತೆಯಾಗಿತ್ತು.

132 ಮಂದಿ ಇದ್ದ ಬೋಯಿಂಗ್‌ 737–800 ವಿಮಾನ ನೈರುತ್ಯ ಚೀನಾದ ಯುನಾನ್‌ ಪ್ರಾಂತ್ಯದ ರಾಜಧಾನಿ ಕುನ್‌ಮಿಂಗ್‌ನಿಂದ ಗುವಾಂಗ್‌ಡಾಂಗ್‌ ಪ್ರಾಂತ್ಯದ ರಾಜಧಾನಿ ಗುವಾಂಗ್‌ಝೌ ಕಡೆಗೆ ಸೋಮವಾರ (ಮಾ.21) ಪ್ರಯಾಣ ಬೆಳಸಿತ್ತು. ಆದರೆ, ವುಝೌ ನಗರದ ಸಮೀಪ ಪತನವಾಗಿತ್ತು. ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಹಾಗೂ ಸಿಬ್ಬಂದಿ ಮೃತಪಟ್ಟಿದ್ದರು.

ಇದನ್ನೂ ಓದಿ:
132 ಜನರಿದ್ದ ದೊಡ್ಡ ವಿಮಾನ ಚೀನಾದಲ್ಲಿ ಪತನ: ಚೂರುಚೂರಾಗಿ ಒಡೆದ ಬೋಯಿಂಗ್‌ 737
ಚೀನಾ ವಿಮಾನದ ಒಂದು ಬ್ಲ್ಯಾಕ್‌ಬಾಕ್ಸ್, ರೆಕಾರ್ಡರ್ ಪತ್ತೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು