ಭಾನುವಾರ, ಅಕ್ಟೋಬರ್ 24, 2021
25 °C

ಬಾಹ್ಯಾಕಾಶಕ್ಕೆ ಸಾಮಗ್ರಿ ರವಾನೆ: ಚೀನಾದ ಮಾನವ ರಹಿತ ನೌಕೆ ಯಶಸ್ವಿ ಉಡ್ಡಯನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀಜಿಂಗ್(ಪಿಟಿಐ): ಮುಂದಿನ ವರ್ಷದ ವೇಳೆಗೆ ಪೂರ್ಣಗೊಳ್ಳಲಿರುವ ನಿರ್ಮಾಣ ಹಂತದಲ್ಲಿರುವ ತನ್ನ ಬಾಹ್ಯಾಕಾಶ ನಿಲ್ದಾಣಕ್ಕೆ ಸಾಮಗ್ರಿ ಸರಬರಾಜು ಮಾಡಲು ಚೀನಾ ಮಾನವ ರಹಿತ ಸರಕು ಹೊತ್ತ ಬಾಹ್ಯಾಕಾಶ ನೌಕೆಯನ್ನು ಸೋಮವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ.

ಟಿಯಾನ್‌ಜೌ–3 ಹೆಸರಿನ ನೌಕೆಯನ್ನು ಹೊತ್ತ ಲಾಂಗ್ ಮಾರ್ಚ್ -7 ವೈ 4 ರಾಕೆಟ್ ಅನ್ನು ಹೈನಾನ್‌ನ ದಕ್ಷಿಣ ದ್ವೀಪ ಪ್ರಾಂತ್ಯದಲ್ಲಿನ ವೆಂಚಾಂಗ್ ಬಾಹ್ಯಾಕಾಶ ಉಡಾವಣಾ ನೆಲೆಯಿಂದ ಉಡ್ಡಯನ ಮಾಡಲಾಯಿತು ಎಂದು ಚೀನಾದ ಮಾನವ ಸಹಿತ ಬಾಹ್ಯಾಕಾಶ ಸಂಸ್ಥೆ (ಸಿಎಂಎಸ್ಎ) ಹೇಳಿದೆ.

ಟಿಯಾನ್‌ಜೌ ಸರಣಿಯ ಈ ನೌಕೆಯು ಬಾಹ್ಯಾಕಾಶ ನಿಲ್ದಾಣದ ಕೋರ್ ಮಾಡ್ಯೂಲ್ ಅನ್ನು ಹೊತ್ತೊಯ್ಯುತ್ತಿದ್ದು, ಮುಂದಿನ ವರ್ಷದ ವೇಳೆಗೆ ಸಿದ್ಧವಾಗಲಿರುವ ಬಾಹ್ಯಾಕಾಶ ನಿಲ್ದಾಣಕ್ಕೆ ಸಾಮಗ್ರಿಗಳನ್ನು ಸಾಗಿಸುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು