ಶುಕ್ರವಾರ, ಡಿಸೆಂಬರ್ 3, 2021
26 °C

ಚೀನಾದಲ್ಲಿ ಕೋವಿಡ್‌ ಉಲ್ಬಣ: 40 ಲಕ್ಷ ಜನಸಂಖ್ಯೆಯ ಲಾಂಝೌ ನಗರದಲ್ಲಿ ಲಾಕ್‌ಡೌನ್‌

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಬೀಜಿಂಗ್‌: ಚೀನಾದ ವಾಯವ್ಯ ಭಾಗದ ಗನ್ಸು ಪ್ರಾಂತ್ಯದ ರಾಜಧಾನಿ ಲಾಂಝೌ ನಗರದಲ್ಲಿ ಮಂಗಳವಾರ ಲಾಕ್‌ಡೌನ್ ಘೋಷಣೆಯಾಗಿದ್ದು, ಇಲ್ಲಿನ 40 ಲಕ್ಷ ಜನರು ಮನೆಯೊಳಗೆಯೇ ಇರುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಅಕ್ಟೋಬರ್‌ 17ರಿಂದೀಚೆಗೆ ಚೀನಾದಲ್ಲಿ 198 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಡೆಲ್ಟಾ ರೂಪಾಂತರದಿಂದಲೇ ಈ ಸೋಂಕು ಹರಡಿತ್ತು. ಈ ಪೈಕಿ ಲಾಂಝೌ ನಗರದಲ್ಲಿ ಗರಿಷ್ಠ ಅಂದರೆ 39 ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಈ ನಗರದಲ್ಲಿ ಇದೀಗ ಲಾಕ್‌ಡೌನ್ ಘೋಷಿಸಲಾಗಿದೆ.

ಈ ನಗರದಲ್ಲಿ ಜನರ ಓಡಾಟಕ್ಕೆ ಈಗ ಕಟ್ಟುನಿಟ್ಟಿನ ನಿರ್ಬಂಧ ವಿಧಿಸಲಾಗಿದೆ. ಇಲ್ಲಿ ಟ್ಯಾಕ್ಸಿ ಮತ್ತು ಬಸ್‌ ಸೇವೆಗಳನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದೆ. ಅಗತ್ಯದ ವಸ್ತುಗಳು ಮತ್ತು ವೈದ್ಯಕೀಯ ಸೌಲಭ್ಯ ಮಾತ್ರ ನಗರದಲ್ಲಿ ಈಗ ಸಿಗುತ್ತಿವೆ.

ಬಹುತೇಕ ದೇಶೀಯ ಪ್ರವಾಸಿಗರಿಂದಲೇ ಕೊರೊನಾ ಸೋಂಕು ಹರಡಿದೆ ಎಂಬುದನ್ನು ಅಧಿಕಾರಿಗಳು ಕಂಡುಕೊಂಡಿದ್ದಾರೆ. ದೇಶದ ದಕ್ಷಿಣ ಭಾಗಕ್ಕಿಂತ ಉತ್ತರ ಭಾಗದಲ್ಲೇ ಅಧಿಕ ಕೋವಿಡ್ ಪ್ರಕರಣಗಳು ದಾಖಲಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು