ಮುಕ್ತ ವ್ಯಾಪಾರ ಒಪ್ಪಂದ: ಚೀನಾ ಹೊಸ ಪ್ರಸ್ತಾವ

ಹೊನಿಯಾರಾ: ದಕ್ಷಿಣ ಪೆಸಿಫಿಕ್ ರಾಷ್ಟ್ರಗಳೊಂದಿಗೆ ಭದ್ರತೆ ಮತ್ತು ಆರ್ಥಿಕ ಸಹಕಾರ ವಿಸ್ತರಿಸುವ ‘ದೂರದೃಷ್ಟಿಯ ಸಮಗ್ರ ಅಭಿವೃದ್ಧಿ’ ಯೋಜನೆಗಳ ಒಪ್ಪಂದದ ಪ್ರಸ್ತಾವವನ್ನು ಚೀನಾ ಮುಂದಿಟ್ಟಿದೆ.
ಈ ಬೆಳವಣಿಗೆಯನ್ನು ಪ್ರಾದೇಶಿಕ ನಾಯಕರೊಬ್ಬರು ‘ಬೀಜಿಂಗ್ನ ಪರೀಧಿ’ಯಲ್ಲಿ ದಕ್ಷಿಣ ಪೆಸಿಫಿಕ್ ರಾಷ್ಟ್ರಗಳನ್ನು ಗಿಗ್ಬಂಧಿಸುವ ಚಾಣಾಕ್ಷ ಪ್ರಯತ್ನವೆಂದು ವ್ಯಾಖ್ಯಾನಿಸಿದ್ದಾರೆ.
ಇಂಡೋ– ಪೆಸಿಫಿಕ್ ನಲ್ಲಿ ಅಮೆರಿಕ, ಭಾರತ, ಜಪಾನ್ ಹಾಗೂ ಆಸ್ಟ್ರೇಲಿಯಾ ರಚಿಸಿರುವ ‘ಕ್ವಾಡ್’ಗೆ ಪ್ರತಿಯಾಗಿ ಚೀನಾ ‘ಬೀಜಿಂಗ್ ಪರೀಧಿ’ ರಚಿಸಲು ಮುಂದಾಗಿದೆ ಎನ್ನಲಾಗುತ್ತಿದೆ.
ಚೀನಾ-ಪೆಸಿಫಿಕ್ ದ್ವೀಪ ರಾಷ್ಟ್ರಗಳ ನಡುವಿನ ಮುಕ್ತ ವ್ಯಾಪಾರ ಒಪ್ಪಂದವು 140 ಕೋಟಿ ಜನಸಂಖ್ಯೆಯ ಚೀನಾಕ್ಕೆ ಲಾಭದಾಯಕ ಮಾರುಕಟ್ಟೆಯಾಗುವ, ಅಲ್ಲದೇ, ಇದು ಹತ್ತು ಸಣ್ಣ ದ್ವೀಪ ರಾಷ್ಟ್ರಗಳಿಗೆ ಚೀನಾದಿಂದ ಹಲವು ದಶಲಕ್ಷ ಡಾಲರ್ ಲಭಿಸುವ ನಿರೀಕ್ಷೆಯನ್ನು ಮೂಡಿಸಿದೆ.
ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಗುರುವಾರದಿಂದ ಪೆಸಿಫಿಕ್ ರಾಷ್ಟ್ರಗಳಿಗೆ ಕೈಗೊಳ್ಳುವ ಭೇಟಿ ಸಂದರ್ಭ, ಇದಕ್ಕೆ ಸಂಬಂಧಿಸಿದ ಐದು ವರ್ಷಗಳ ಯೋಜನೆ ಮತ್ತು ವಿಸ್ತೃತ ಕರಡು ಒಪ್ಪಂದಗಳು ಪ್ರಮುಖ ಚರ್ಚೆಯ ವಿಷಯವಾಗಿವೆ. ಮೇ 30ರಂದು ಫಿಜಿಯಲ್ಲಿ ವಾಂಗ್ ಅವರು ಈ ರಾಷ್ಟ್ರಗಳ ವಿದೇಶಾಂಗ ಸಚಿವರನ್ನು ಭೇಟಿಯಾಗುವಾಗ ‘ದೂರದೃಷ್ಟಿಯ ಸಮಗ್ರ ಅಭಿವೃದ್ಧಿ’ ಯೋಜನೆ ಅನುಮೋದನೆಗೆ ಸಿದ್ಧವಾಗಿದೆ ಎನ್ನಲಾಗಿದೆ.
ಚೀನಾ-ಪೆಸಿಫಿಕ್ ದ್ವೀಪ ರಾಷ್ಟ್ರಗಳ ನಡುವಿನ ಮುಕ್ತ ವ್ಯಾಪಾರ ಒಪ್ಪಂದವು 140 ಕೋಟಿ ಜನಸಂಖ್ಯೆಯ ಚೀನಾಕ್ಕೆ ಲಾಭದಾಯಕ ಮಾರುಕಟ್ಟೆಯಾಗುವ, ಅಲ್ಲದೇ, ಇದು ಹತ್ತು ಸಣ್ಣ ದ್ವೀಪ ರಾಷ್ಟ್ರಗಳಿಗೆ ಚೀನಾದಿಂದ ಹಲವು ದಶಲಕ್ಷ ಡಾಲರ್ ಲಭಿಸುವ ನಿರೀಕ್ಷೆಯನ್ನು ಮೂಡಿಸಿದೆ.
ಪೆಸಿಫಿಕ್ ರಾಷ್ಟ್ರಗಳ ತಮ್ಮ ಸಹವರ್ತಿ ನಾಯಕರಿಗೆ ಬರೆದ ಪತ್ರದಲ್ಲಿ ಫೆಡರೇಟೆಡ್ ಸ್ಟೇಟ್ಸ್ ಆಫ್ ಮೈಕ್ರೋನೇಷಿಯಾ ಅಧ್ಯಕ್ಷ ಡೇವಿಡ್ ಪನುಯೆಲೊ ಅವರು ‘ಒಪ್ಪಂದವು ಮೊದಲ ನೋಟಕ್ಕೆ ಆಕರ್ಷಕವಾಗಿ ಕಾಣಿಸುತ್ತಿದೆ. ಆದರೆ ಚೀನಾಕ್ಕೆ ನಮ್ಮ ಪ್ರದೇಶದ ಪ್ರವೇಶ ಮತ್ತು ನಿಯಂತ್ರಣ ಸಾಧಿಸಲು ದಾರಿ ಮಾಡಿಕೊಡುತ್ತದೆ. ಫೆಸಿಪಿಕ್ನ ಪ್ರಾದೇಶಿಕ ಶಾಂತಿ, ಭದ್ರತೆ ಮತ್ತು ಸ್ಥಿರತೆಯನ್ನು ಒಡೆಯಲಿದೆ’ ಎಂದು ಎಚ್ಚರಿಸಿದ್ದಾರೆ.
ಆದರೆ, ಇತರ ಪೆಸಿಫಿಕ್ ನಾಯಕರು ಚೀನಾ ಪ್ರಸ್ತಾಪವನ್ನು ಬಹುಶಃ ಲಾಭದಾಯಕ ಅಥವಾ ಪ್ರಯೋಜನಕಾರಿಯಾಗಿ ಪರಿಗಣಿಸಬಹುದು ಎನ್ನಲಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.