ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದೊಂದಿಗೆ ಉತ್ತಮ ದ್ವಿಪಕ್ಷೀಯ ಸಂಬಂಧ ಹೊಂದಲು ಸಿದ್ಧ: ಚೀನಾ

Last Updated 25 ಡಿಸೆಂಬರ್ 2022, 11:00 IST
ಅಕ್ಷರ ಗಾತ್ರ

ಬೀಜಿಂಗ್‌: ‘ಭಾರತದೊಂದಿಗೆ ‘ಸ್ಥಿರ ಮತ್ತು ಉತ್ತಮ ಬೆಳವಣಿಗೆ’ಯ ದ್ವಿಪಕ್ಷೀಯ ಸಂಬಂಧವನ್ನು ಹೊಂದಲು ಚೀನಾ ಸಿದ್ಧವಿದೆ’ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್‌ ಯಿ ಭಾನುವಾರ ಹೇಳಿದರು. ‘2020ರಿಂದ ಈಚೆಗೆ ಚೀನಾ–ಭಾರತ ಮಧ್ಯೆ ಉಲ್ಬಣಿಸಿರುವ ಗಡಿ ವಿವಾದ ಸಂಬಂಧ ಗಡಿಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಎರಡೂ ದೇಶಗಳು ಬದ್ಧವಾಗಿದೆ’ ಎಂದೂ ಹೇಳಿದರು.

ಅಂತರರಾಷ್ಟ್ರೀಯ ಸ್ಥಿತಿಗತಿ ಮತ್ತು ಚೀನಾದ ವಿದೇಶಾಂಗ ಸಂಬಂಧ 2022 ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ‘ಭಾರತ ಹಾಗೂ ಚೀನಾವು ಯಾವಾಗಲೂ ರಾಜತಾಂತ್ರಿಕ ಮತ್ತು ಸೇನಾಮಟ್ಟದ ಸಂಪರ್ಕವನ್ನು ಕಾಯ್ದುಕೊಂಡಿವೆ’ ಎಂದರು. ಗಡಿ ವಿವಾದ ಬಗೆಹರಿಸುವ ಸಂಬಂಧ ಇದುವರೆಗೂ 17 ಸುತ್ತಿನ ಮಾತುಕತೆ ನಡೆದಿದೆ.

ಚೀನಾದ ರಾಜತಾಂತ್ರಿಕ ಕೆಲಸಗಳ ಬಗ್ಗೆ ದೀರ್ಘ ಭಾಷಣ ಮಾಡಿದ ಅವರು, ಭಾರತ–ಚೀನಾ ಗಡಿ ವಿವಾದದ ಕುರಿತು ಕಡಿಮೆ ಮಾತನಾಡಿದರು. ಅಮೆರಿಕ–ಚೀನಾ ಸಂಬಂಧ, ಉಕ್ರೇನ್‌ ಯುದ್ಧದ ನಡುವೆಯೂ ರಷ್ಯಾದೊಂದಿಗೆ ಹೆಚ್ಚುತ್ತಿರುವ ಚೀನಾ ಸಂಬಂಧದ ಕುರಿತು ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT