ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೈವಾನ್‌ ಸ್ವಾಧೀನಕ್ಕೆ ಚೀನಾ ಸೇನಾ ಬೆದರಿಕೆ: ಪರಮಾಧಿಕಾರ ಮೊಟಕು ನಿರ್ಧಾರಕ್ಕೆ ಸಹಿ

ದ್ವೀಪದ ಪರಮಾಧಿಕಾರ ಮೊಟಕು ನಿರ್ಧಾರಕ್ಕೆ ಷಿ ಜಿನ್‌ಪಿಂಗ್‌ ಸಹಿ
Last Updated 10 ಆಗಸ್ಟ್ 2022, 14:09 IST
ಅಕ್ಷರ ಗಾತ್ರ

ಬೀಜಿಂಗ್‌/ಲಂಡನ್‌: ಸ್ವತಂತ್ರ ಆಡಳಿತದ ದ್ವೀಪ ತೈವಾನ್‌ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸೇನೆ ಬಳಸುವುದಾಗಿ ಚೀನಾ ಬುಧವಾರ ಮತ್ತೊಮ್ಮೆ ಬೆದರಿಕೆ ಹಾಕಿದೆ. ಜತೆಗೆ ತೈವಾನ್‌ ಪ್ರತ್ಯೇಕತಾವಾದಿಗಳಿಗೂ ಕಠಿಣ ಎಚ್ಚರಿಕೆಯನ್ನು ರವಾನಿಸಿದೆ.

ತೈವಾನ್ದ್ವೀಪದ ನಿಯಂತ್ರಣಕ್ಕಾಗಿ ಸೇನಾಪಡೆಗಳನ್ನು ಅಥವಾ ಆಡಳಿತಗಾರರನ್ನು ಕಳುಹಿಸುವುದಿಲ್ಲವೆಂದು 1993 ಮತ್ತು 2000ರಲ್ಲಿ ಹೊರಡಿಸಿದ್ದ ಎರಡು ಶ್ವೇತಪತ್ರಗಳಲ್ಲಿ ನೀಡಿದ್ದ ಭರವಸೆಯನ್ನೂ ಚೀನಾ ಹಿಂಪಡೆದಿದೆ. ಬುಧವಾರ ಹೊಸದಾಗಿ ಬಿಡುಗಡೆ ಮಾಡಿರುವ ಶ್ವೇತಪತ್ರದಲ್ಲಿ ‘ಇದು ತೈವಾನ್‌ನ ಆರ್ಥಿಕ ಪ್ರಗತಿ ಮತ್ತು ಭದ್ರತೆ ಹಾಗೂ ಘನತೆಯನ್ನು ಖಾತರಿಪಡಿಸುತ್ತದೆ’ ಎಂದು ಹೇಳಿದೆ.

ತೈವಾನ್‌ ಸ್ವಾಯತ್ತ ಅಧಿಕಾರ ಮೊಟಕುಗೊಳಿಸುವ ನಿರ್ಧಾರಕ್ಕೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಸಹಿ ಹಾಕಿರುವ ಅಧಿಕೃತ ದಾಖಲೆಯನ್ನು ಬುಧವಾರ ಪ್ರದರ್ಶಿಸಲಾಗಿದೆ.

ತೈವಾನ್‌ನ ಪ್ರತ್ಯೇಕವಾದ ಸಹಿಸಲ್ಲ:

‘ತೈವಾನ್‌ನಲ್ಲಿ ಪ್ರತ್ಯೇಕತಾವಾದದ ಚಟುವಟಿಕೆಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಅಗತ್ಯಬಿದ್ದಲ್ಲಿ ಸ್ವಯಂ ಆಡಳಿತದ ದ್ವೀಪವನ್ನು ಬಲವಂತವಾಗಿ ತನ್ನ ತೆಕ್ಕೆಗೆ ತೆಗೆದುಕೊಳ್ಳಲಾಗುವುದು’ ಎಂದು ಚೀನಾ ಎಚ್ಚರಿಕೆ ನೀಡಿದೆ.

‘ತೈವಾನ್‌ ಅನ್ನು ಬೀಜಿಂಗ್‌ ಜತೆಗೆ ಶಾಂತಿಯುತವಾಗಿ ಒಗ್ಗೂಡಿಸಲು ಬಯಸುತ್ತೇವೆ. ಇದಕ್ಕಾಗಿ ಸೇನೆ ಬಳಸುವುದು ನಮಗೂ ಇಷ್ಟವಿಲ್ಲ. ಆದರೆ, ಅಗತ್ಯಬಿದ್ದಲ್ಲಿ ಸೇನಾ ಬಳಕೆ ಸೇರಿ ಎಲ್ಲ ಆಯ್ಕೆಗಳೂ ನಮ್ಮ ಬಳಿ ಇವೆ’ ಎಂದು ಅದು ಹೇಳಿದೆ.

‘ಪ್ರತ್ಯೇಕತಾವಾದಿಗಳು ಪ್ರಚೋದನೆಗೆ ಇಳಿದರೆ ಮತ್ತು ಬಾಹ್ಯಶಕ್ತಿಗಳು ತಮ್ಮ ಎಲ್ಲೆಯನ್ನು ಮೀರಿದರೆ ನಾವು ಅದಕ್ಕೆ ತಕ್ಕ ಪ್ರತ್ಯುತ್ತರವನ್ನು ನಮ್ಮ ಪಡೆಗಳ ಮೂಲಕ ನೀಡುತ್ತೇವೆ’ ಎಂದು ಕಠಿಣ ಎಚ್ಚರಿಕೆ ನೀಡಿದೆ.

ತೈವಾನ್‌ಗೆ ಸೇನಾ ಮತ್ತು ರಾಜಕೀಯ ಬೆಂಬಲ ನೀಡುತ್ತಿರುವ ಅಮೆರಿಕದ ಜತೆಗೆ ಸಾಗರ ಭದ್ರತೆ, ಹವಾಮಾನ ಬದಲಾವಣೆ ಸೇರಿ ಎಲ್ಲ ರೀತಿಯ ಮಾತುಕತೆ ಸ್ಥಗಿತಗೊಳಿಸಲಾಗಿದೆ ಎಂದು ಚೀನಾ ಪುನರುಚ್ಚರಿಸಿದೆ.

ಚೀನಾದ ಯುದ್ಧನೌಕೆಗಳು ಮತ್ತು ವಾಯುಪಡೆಯ ವಿಮಾನಗಳು ತೈವಾನ್‌ನ ಜಲಪ್ರದೇಶ ಮತ್ತು ವಾಯುಪ್ರದೇಶಗಳನ್ನುಅತಿಕ್ರಮಿಸಿ ವಾರದಿಂದಲೂ ಕ್ಷಿಪಣಿಗಳನ್ನು ಉಡಾಯಿಸಿವೆ ಎಂದು ತೈವಾನ್‌ ಸಂಪುಟ ವ್ಯವಹಾರಗಳ ಕಚೇರಿ ಹೇಳಿಕೆ ಬಿಡುಗಡೆ ಮಾಡಿದೆ.

ತೈವಾನ್ ಕೂಡ ತನ್ನ ಪಡೆಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಿ,ಮಂಗಳವಾರ ಪಿಂಗ್ಟಂಗ್ ಪ್ರದೇಶದ ಆಗ್ನೇಯ ಕರಾವಳಿಯಲ್ಲಿ ಫಿರಂಗಿ ದಾಳಿಯ ತಾಲೀಮು ನಡೆಸಿತು.

ಚೀನಾದ ನಡೆಯನ್ನು ಅಮೆರಿಕ, ಜಪಾನ್‌ ಸೇರಿ ಹಲವು ರಾಷ್ಟ್ರಗಳುತೀವ್ರವಾಗಿ ಖಂಡಿಸಿದ್ದು, ‘ಈ ಪ್ರದೇಶದಲ್ಲಿ ಹಡಗುಗಳು ಮತ್ತು ವಿಮಾನಗಳ ಸಂಚಾರಕ್ಕೆ ಅಡ್ಡಿಪಡಿಸಿ, ಜಾಗತಿಕ ಪೂರೈಕೆಯ ಸರಪಳಿಗೆ ಧಕ್ಕೆತಂದಿದೆ’ ಎಂದು ಆರೋಪಿಸಿವೆ.

ಚೀನಾ ರಾಯಭಾರಿಗೆ ಸಮನ್ಸ್‌: ತೈವಾನ್‌ ಮೇಲೆ ಚೀನಾ ಇತ್ತೀಚಿನ ದಿನಗಳಲ್ಲಿ ತೋರುತ್ತಿರುವ ಆಕ್ರಮಣಕಾರಿ ವರ್ತನೆ ಮತ್ತು ಕ್ರಮಗಳ ಬಗ್ಗೆ ವಿವರಣೆ ನೀಡುವಂತೆ ಬ್ರಿಟನ್‌ ಬುಧವಾರ ಚೀನಾದ ರಾಯಭಾರಿಗೆ ನೋಟಿಸ್‌ ನೀಡಿದೆ.

ಬ್ರಿಟನ್‌ನ ಭವಿಷ್ಯದ ಪ್ರಧಾನಿ ಎನ್ನಲಾಗುತ್ತಿರುವ ವಿದೇಶಾಂಗ ಸಚಿವೆ ಲಿಜ್ ಟ್ರುಸ್, ಕ್ಷಿಪಣಿಗಳ ಉಡಾವಣೆ, ತೈವಾನ್‌ ವಾಯು ಪ್ರದೇಶಗಳ ಮೇಲೆ ನಡೆಸಿರುವ ಅತಿಕ್ರಮಣದ ಬಗ್ಗೆ ರಾಯಭಾರಿ ಝೆಂಗ್ ಜೆಗಾಂಗ್ ಅವರಿಂದ ವಿವರಣೆ ಕೇಳಲಾಗಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT