ಭಾನುವಾರ, ಡಿಸೆಂಬರ್ 5, 2021
27 °C

ಚೀನಾ: ಕೋವಿಡ್ ಉಲ್ಬಣಗೊಳ್ಳುತ್ತಿರುವ ನಡುವೆ ಒಂದೇ ದಿನ 100 ಹೊಸ ಪ್ರಕರಣಗಳು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬೀಜಿಂಗ್: ಬೀಜಿಂಗ್‌ನಲ್ಲಿ ಒಂಬತ್ತಕ್ಕೂ ಹೆಚ್ಚು ಪ್ರಕರಣಗಳು ಸೇರಿದಂತೆ ಚೀನಾದಲ್ಲಿ ಬುಧವಾರ ಒಂದೇ ದಿನ 100 ಕೋವಿಡ್ ಸೋಂಕಿನ ಪ್ರಕರಣಗಳು ವರದಿಯಾಗಿದ್ದು, ಸೋಂಕು ನಿಯಂತ್ರಣಕ್ಕಾಗಿ ನಗರದ ನಿವಾಸಿಗಳು ದೇಶದ ಬೇರೆ ಬೇರೆ ಭಾಗಗಳಿಗೆ ಪ್ರಯಾಣಿಸದಂತೆ ನಿರ್ಬಂಧಗಳನ್ನು ವಿಧಿಸಲಾಗಿದೆ.

ದೇಶದಲ್ಲಿ 93 ಸ್ಥಳೀಯರಿಗೆ ಹಾಗೂ 16 ಮಂದಿ ವಿದೇಶದಿಂದ ಬಂದವರಿಗೆ ಮಂಗಳವಾರ ಸೋಂಕು ದೃಢಪಟ್ಟಿತ್ತು. ಇದು ಇತ್ತೀಚೆಗಿನ ವಾರಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾದ ದಿನವಾಗಿದೆ.

ರಷ್ಯಾದ ಗಡಿಯಲ್ಲಿರುವ ಹೀಲಾಂಗ್‌ಜಿಯಾಂಗ್ ಪ್ರಾಂತ್ಯದಲ್ಲಿ 35, ಹೆಬೈನಲ್ಲಿ 14, ಗನ್ಸುದಲ್ಲಿ 14, ಬೀಜಿಂಗ್‌ನಲ್ಲಿ ಒಂಬತ್ತು, ಇನ್ನರ್ ಮಂಗೋಲಿಯಾದಲ್ಲಿ ಆರು, ಚಾಂಗ್‌ಕಿಂಗ್ ಮತ್ತು ಕಿಂಗ್‌ಹೈನಲ್ಲಿ ತಲಾ ನಾಲ್ಕು, ಜಿಯಾಂಗ್‌ಕ್ಸಿ, ಯುನ್ನಾನ್ ಮತ್ತು ನಿಂಗ್‌ಕ್ಸಿಯಾದಲ್ಲಿ ತಲಾ ಎರಡು ಮತ್ತು ಸಿಚುವಾನ್‌ನಲ್ಲಿ ಒಂದು ಪ್ರಕರಣ ವರದಿಯಾಗಿದೆ ಎಂದು ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು