ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಂಘೈನಲ್ಲಿ ಲಾಕ್‌ಡೌನ್‌ ತೆರವು: ಜನ ಜೀವನ ಸಹಜ ಸ್ಥಿತಿಗೆ

ಎರಡು ತಿಂಗಳ ಬಳಿಕ ಚೀನಾದ ವಾಣಿಜ್ಯ ನಗರಿ ಶಾಂಘೈನಲ್ಲಿ ಬುಧವಾರ ಲಾಕ್‌ಡೌನ್‌ ತೆರವು ತೆರವುಗೊಳಿಸಿದ್ದು, ಜನ ಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಸಂಚಾರ ವ್ಯವಸ್ಥೆ, ಮಳಿಗೆಗಳು ಮತ್ತು ಶಾಲೆಗಳು ಭಾಗಶಃ ಪುನರಾರಂಭವಾದವು.
Last Updated 1 ಜೂನ್ 2022, 13:37 IST
ಅಕ್ಷರ ಗಾತ್ರ

ಶಾಂಘೈ: ಎರಡು ತಿಂಗಳ ಬಳಿಕ ಚೀನಾದ ವಾಣಿಜ್ಯ ನಗರಿ ಶಾಂಘೈನಲ್ಲಿ ಬುಧವಾರ ಲಾಕ್‌ಡೌನ್‌ ತೆರವು ತೆರವುಗೊಳಿಸಿದ್ದು, ಜನ ಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಸಂಚಾರ ವ್ಯವಸ್ಥೆ, ಮಳಿಗೆಗಳು ಮತ್ತು ಶಾಲೆಗಳು ಭಾಗಶಃ ಪುನರಾರಂಭವಾದವು.

ಎರಡು ತಿಂಗಳ ಕಾಲ ಕಠಿಣ ಲಾಕ್‌ಡೌನ್‌ ಮತ್ತು ನಿರ್ಬಂಧ ಎದುರಿಸಿದ್ದ ಮತ್ತು ಇದರ ವಿರುದ್ಧ ಪ್ರತಿಭಟನೆ ನಡೆಸಿದ್ದ ಸಾರ್ವಜನಿಕರು ನಿರಾಳರಾಗಿ ರಸ್ತೆಗಿಳಿದ ದೃಶ್ಯ ಕಂಡು ಬಂತ್ತು. ಸುರಂಗ ಮಾರ್ಗ, ಬಸ್‌ ಮತ್ತು ರೈಲು ಸಂಚಾರ ಪುನರಾರಂಭವಾಯಿತು. ಆದಾಗ್ಯೂ ಸೋಂಕು ಅಲ್ಲಲ್ಲಿ ಪತ್ತೆಯಾಗುತ್ತಿರುವ ಹಿನ್ನೆಲೆಯಲ್ಲಿ ನಗರದ 2.5 ಕೋಟಿ ಜನರು ಕೆಲ ನಿರ್ಬಂಧಗಳಿಗೆ ಒಳಪಟ್ಟಿದ್ದಾರೆ.

ಶಾಲೆಗಳು ಭಾಗಶಃ ಆರಂಭವಾಗಿದ್ದು, ಶಾಫಿಂಗ್‌ ಮಾಲ್‌, ಸೂಪರ್‌ ಮಾರ್ಕೆಟ್‌ಗಳು, ಅಗತ್ಯ ವಸ್ತುಗಳ ಮಳಿಗೆಗಳನ್ನು ಶೇ 75 ರಷ್ಟು ಸಾಮರ್ಥ್ಯದಲ್ಲಿ ಹಂತ ಹಂತವಾಗಿ ತೆರೆಯಲಾಗುತ್ತಿದೆ.

ಎಲ್ಲ ನಿರ್ಬಂಧಗಳನ್ನು ಹಂತ ಹಂತವಾಗಿ ತೆರವುಗೊಳಿಸಲಾಗುವುದು ಎಂದು ಇಲ್ಲಿನ ಸರ್ಕಾರ ಹೇಳಿದೆ. ಆದರೆ ಸ್ಥಳೀಯ ಸಂಸ್ಥೆಗಳು ಪರಿಸ್ಥಿತಿಗೆ ತಕ್ಕಂತೆ ನಿಯಮಗಳನ್ನು ರೂಪಿಸಲು ಅವಕಾಶ ನೀಡಿದೆ.

ಶಾಂಘೈ ಮತ್ತು ರಾಜಧಾನಿ ಬೀಜಿಂಗ್‌ನಲ್ಲಿ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಬೇಕಾದರೆ 48 ಗಂಟೆಗಳ ಹಿಂದೆ ಪಡೆದ ಕೋವಿಡ್‌ ನೆಗಟಿವ್‌ ವರದಿ ಹೊಂದಿರುವುದು ಕಡ್ಡಾಯವಾಗಿದೆ.

ಏಪ್ರಿಲ್‌ನಲ್ಲಿ ದಿನನಿತ್ಯ 20,000 ಹೊಸ ಪ್ರಕರಣಗಳು ವರದಿಯಾಗುತ್ತಿದ್ದ ಶಾಂಘೈನಲ್ಲಿ ಬುಧವಾರ ಕೇವಲ 15 ಪ್ರಕರಣಗಳು ಮಾತ್ರ ವರದಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT