ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾ, ಅಮೆರಿಕ ರಕ್ಷಣಾ ಸಚಿವರ ಭೇಟಿ, ಮಾತುಕತೆ

Last Updated 10 ಜೂನ್ 2022, 11:19 IST
ಅಕ್ಷರ ಗಾತ್ರ

ಸಿಂಗಪುರ: ಅಮೆರಿಕ ಮತ್ತು ಚೀನಾದ ರಕ್ಷಣಾ ಸಚಿವರು ಇದೇ ಮೊದಲ ಬಾರಿಗೆ ಇಲ್ಲಿ ಮುಖಾಮುಖಿಯಾಗಿ ಭೇಟಿಯಾಗಿದ್ದು, ತೈವಾನ್‌ ಸೇರಿದಂತೆ ವಿವಿಧ ವಿವಾದಗಳಿಗೆ ಪರಿಹಾರವನ್ನು ಕಂಡುಕೊಳ್ಳುವ ಕುರಿತು ಚರ್ಚಿಸಿದರು.

ಇತ್ತೀಚಿನ ವರ್ಷಗಳಲ್ಲಿ ಉಭಯ ದೇಶಗಳ ನಡುವಣ ಬಾಂಧವ್ಯ ಹದಗೆಟ್ಟಿದೆ. ತೈವಾನ್ ಮತ್ತು ದಕ್ಷಿಣ ಚೀನಾ ಸಮುದ್ರ ಭಾಗಕ್ಕೆ ಅನ್ವಯಿಸಿ ಸೈಬರ್‌ ಭದ್ರತೆ ಹಾಗೂ ಮಾನವ ಹಕ್ಕುಗಳು ಕುರಿತು ಸಂಘರ್ಷಗಳೂ ನಡೆದಿವೆ.

ಭದ್ರತೆ ಕುರಿತಂತೆ ಇಲ್ಲಿ ನಡೆಯುತ್ತಿರುವ ವಿವಿಧ ದೇಶಗಳ ರಕ್ಷಣಾ ಸಚಿವರು, ಅಧಿಕಾರಿಗಳ ಶೃಂಗಸಭೆಗೆ ಆಗಮಿಸಿರುವಅಮೆರಿಕದ ಲಾಯ್ಡ್‌ ಆಸ್ಟಿನ್ ಮತ್ತು ಚೀನಾದ ವೀ ಫೆಂಗೆ ಇಬ್ಬರೂ ಉಭಯ ರಾಷ್ಟ್ರಗಳ ಬಾಂಧವ್ಯ ವೃದ್ಧಿ ಕುರಿತು ಚರ್ಚಿಸಿದರು.

ಉಭಯತ್ರರ ನಡುವಿನ ಮಾತುಕತೆಯನ್ನು ಅಮೆರಿಕ ದೃಢಪಡಿಸಿದೆ. ಚೀನಾದ ಅಧಿಕೃತದ ಮಾಧ್ಯಮ ಸಿಸಿಟಿವಿಯು, ಆಸ್ಟಿನ್‌ ಅವರು ಅಧಿಕಾರ ವಹಿಸಿಕೊಂಡ ನಂತರ ನಡೆದ ಮೊದಲ ಭೇಟಿ ಇದಾಗಿದ್ದು, ಸಕಾರಾತ್ಮಕವಾಗಿ ಚರ್ಚೆ ನಡೆದಿದೆ ಎಂದು ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT