ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗತ್ತಿಗೆ ಕೋವಿಡ್‌ ಹರಡಿದ ಚೀನಾ ದೊಡ್ಡ ಬೆಲೆ ತೆರಲಿದೆ: ಟ್ರಂಪ್‌ ‌

Last Updated 8 ಅಕ್ಟೋಬರ್ 2020, 1:33 IST
ಅಕ್ಷರ ಗಾತ್ರ

ವಾಷಿಂಗ್ಟನ್‌ ಡಿಸಿ: ಕೋವಿಡ್‌–19 ಸಾಂಕ್ರಾಮಿಕದ ವಿಚಾರದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಮತ್ತೊಮ್ಮೆ ಚೀನಾವನ್ನು ದೂಷಿಸಿದ್ದಾರೆ. ಇದಕ್ಕಾಗಿ ಚೀನಾ ದೊಡ್ಡ ಬೆಲೆ ನೀಡಬೇಕಾಗುತ್ತದೆ ಎಂದೂ ಅವರು ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಈ ಕುರಿತು ಬುಧವಾರ ವಿಡಿಯೊ ಸಂದೇಶ ಹಂಚಿಕೊಂಡಿದ್ದಾರೆ. ‘ಸಾಂಕ್ರಾಮಿಕ ರೋಗದಿಂದ ನಿಮ್ಮನ್ನು ಮುಕ್ತಗೊಳಿಸಲು ನಾನು ಹೊರಟಿದ್ದೇನೆ. ಅದಕ್ಕಾಗಿ ನೀವು ಬೆಲೆ ತೆರಬೇಕಿಲ್ಲ. ಈಗ ಏನು ಸಂಭವಿಸಿದೆಯೋ ಅದರಲ್ಲಿ ನಿಮ್ಮ ತಪ್ಪೇನೂ ಇಲ್ಲ. ಇದು ಚೀನಾ ಮಾಡಿದ ತಪ್ಪು. ಈ ದೇಶಕ್ಕೆ, ವಿಶ್ವಕ್ಕೆ ಬಗೆದ ಈ ಕೃತ್ಯಕ್ಕಾಗಿ ಚೀನಾ ದೊಡ್ಡ ಬೆಲೆ ನೀಡಬೇಕಾಗುತ್ತದೆ,’ ಎಂದು ಟ್ರಂಪ್‌ ಹೇಳಿದ್ದಾರೆ.

ತಮಗೆ ಉಂಟಾದ ಕೊರೊನಾ ವೈರಸ್‌ ಸೋಂಕು ‘ದೇವರ ಆಶೀರ್ವಾದ’ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ರೋಗಕ್ಕೆ ನೀಡುವ ಸಂಭಾವ್ಯ ಔಷಧ, ಚಿಕಿತ್ಸೆಯ ಬಗ್ಗೆ ತಮಗೆ ಈ ಮೂಲಕ ಅರಿವು ಸಿಕ್ಕಂತಾಗಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT