ಸೋಮವಾರ, ಜನವರಿ 24, 2022
28 °C

ಕೋವಿಡ್‌ ಉಲ್ಬಣ: ಚೀನಾದ ಷಿಯಾನ್‌ ನಗರದಲ್ಲಿ ಅಂತರರಾಷ್ಟ್ರೀಯ ವಿಮಾನ ಸಂಚಾರ ಸ್ಥಗಿತ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬೀಜಿಂಗ್‌: ಚೀನಾದ ಪ್ರಸಿದ್ಧ ಪ್ರವಾಸಿ ನಗರ ಷಿಯಾನ್‌ನಲ್ಲಿ ಕೋವಿಡ್‌–19 ಉಲ್ಬಣಗೊಂಡಿದ್ದು, ಅಂತರರಾಷ್ಟ್ರೀಯ ‍ವಿಮಾನ ಸಂಚಾರವನ್ನು ರದ್ದುಗೊಳಿಸಲಾಗಿದೆ.

‘ಈಗಾಗಲೇ ಷಿಯಾನ್‌ ನಗರವು ದೇಶಿಯ ವಿಮಾನ ಸಂಚಾರವನ್ನು ರದ್ದುಗೊಳಿಸಿತ್ತು. ಡಿಸೆಂಬರ್‌ ಪ್ರಾರಂಭದಿಂದ ಲಾಕ್‌ಡೌನ್‌ ಅನ್ನು ಹೇರಿತ್ತು. ಇದೀಗ ಬುಧವಾರದಿಂದ ಜಾರಿಗೆ ಬರುವಂತೆ ಅಂತರರಾಷ್ಟ್ರೀಯ ವಿಮಾನ ಸಂಚಾರವನ್ನೂ ರದ್ದುಗೊಳಿಸಲಾಗಿದೆ’ ಎಂದು ಷಿಯಾನ್‌ ಷಿಯನ್ಯಾಂಗ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಿಳಿಸಿದೆ.

ಷಿಯಾನ್‌, 36 ದೇಶಗಳಲ್ಲಿ 74 ಪ್ರಮುಖ ಸ್ಥಳಗಳನ್ನು ಸಂಪರ್ಕಿಸುವ ಅಂತರರಾಷ್ಟ್ರೀಯ ಮಾರ್ಗಗಳನ್ನು ಹೊಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು