ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರುಣಾಚಲಪ್ರದೇಶ ಗಡಿ ಸಮೀಪದ ಟಿಬೆಟನ್‌ ನಗರಕ್ಕೆ ಚೀನಾ ಅಧ್ಯಕ್ಷ ಜಿನ್‌ಪಿಂಗ್‌ ಭೇಟಿ

ಅರುಣಾಚಲಪ್ರದೇಶ ಗಡಿಗೆ ಹೊಂದಿಕೊಂಡಿರುವ ನಗರ
Last Updated 23 ಜುಲೈ 2021, 8:03 IST
ಅಕ್ಷರ ಗಾತ್ರ

ಬೀಜಿಂಗ್‌: ಅರುಣಾಚಲಪ್ರದೇಶ ಗಡಿ ಸಮೀಪವಿರುವ, ಟಿಬೆಟ್‌ನ ನೈಂಗ್ಚಿ ನಗರಕ್ಕೆ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರು ಇತ್ತೀಚೆಗೆ ಭೇಟಿ ನೀಡಿದ್ದಾಗಿ ಸರ್ಕಾರಿ ಒಡೆತನದ ಸುದ್ದಿಸಂಸ್ಥೆ ಷಿನ್‌ಹುವಾ ವರದಿ ಮಾಡಿದೆ.

‘ಜಿನ್‌ಪಿಂಗ್‌ ಅವರು ನೈಂಗ್ಚಿಯ ಮೇನ್‌ಲಿಂಗ್‌ ವಿಮಾನ ನಿಲ್ದಾಣದಲ್ಲಿ ಬುಧವಾರ ಬಂದಿಳಿದರು. ಅವರಿಗೆ ಸ್ಥಳೀಯ ಅಧಿಕಾರಿಗಳು ಹಾಗೂ ವಿವಿಧ ಸಮುದಾಯಗಳ ಜನರು ಆತ್ಮೀಯ ಸ್ವಾಗತ ಕೋರಿದರು’ ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.

ನಂತರ ಅವರು ನ್ಯಾಂಗ್‌ ನದಿಗೆ ಸೇತುವೆ ನಿರ್ಮಿಸಿರುವ ಸ್ಥಳಕ್ಕೆ ಭೇಟಿ ನೀಡಿದರು. ಬ್ರಹ್ಮಪುತ್ರ ನದಿ ಪಾತ್ರದ ಪರಿಸರ ಸಂರಕ್ಷಣೆಗಾಗಿ ಕೈಗೊಡಿರುವ ಕ್ರಮಗಳನ್ನು ಸಹ ಅವರು ಪರಿಶೀಲಿಸಿದರು. ಬ್ರಹ್ಮಪುತ್ರ ನದಿಗೆ ಟಿಬೆಟನ್‌ ಭಾಷೆಯಲ್ಲಿ ಯಾರ್ಲಂಗ್ ಝಾಂಗ್ಬೊ ಎಂದು ಕರೆಯಲಾಗುತ್ತದೆ.

ಅರುಣಾಚಲಪ್ರದೇಶ ತನ್ನ ವಶದಲ್ಲಿರುವ ದಕ್ಷಿಣ ಟಿಬೆಟ್‌ನ ಭಾಗ ಎಂದು ಚೀನಾ ಹೇಳಿಕೊಳ್ಳುತ್ತಿದ್ದು, ಭಾರತ ಈ ವಾದವನ್ನು ಸ್ಪಷ್ಟವಾಗಿ ತಿರಸ್ಕರಿಸಿದೆ. ಉಭಯ ದೇಶಗಳ ನಡುವೆ ಗಡಿಗೆ ಸಂಬಂಧಿಸಿ ವಿವಾದ ಇದೆ. ಹೀಗಾಗಿ, ಟಿಬೆಟ್‌ನ ನಗರವೊಂದಕ್ಕೆ ಚೀನಾದ ಅಧ್ಯಕ್ಷ ಜಿನ್‌ಪಿಂಗ್‌ ಭೇಟಿ ನೀಡಿರುವುದಕ್ಕೆ ಮಹತ್ವ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT