ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ಪಾದನಾ ಚಟುವಟಿಕೆ: ಅಚ್ಚರಿಯ ಪ್ರಗತಿ ದಾಖಲಿಸಿದ ಚೀನಾ

Last Updated 1 ಮಾರ್ಚ್ 2023, 14:43 IST
ಅಕ್ಷರ ಗಾತ್ರ

ಬೀಜಿಂಗ್: ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆ ಎನಿಸಿರುವ ಚೀನಾದಲ್ಲಿ ತಯಾರಿಕಾ ಚಟುವಟಿಕೆಗಳು ತೀವ್ರಗತಿಯಲ್ಲಿ ಹೆಚ್ಚಿವೆ. ಅದರಲ್ಲೂ, ಕಳೆದ ಒಂದು ದಶಕಕ್ಕೆ ಹೋಲಿಸಿದರೆ, ಫೆಬ್ರುವರಿಯಲ್ಲಿ ಉತ್ಪಾದನಾ ಚಟುವಟಿಕೆಗಳಿಗೆ ಸಿಕ್ಕಿರುವ ವೇಗ ಅಚ್ಚರಿ ಮೂಡಿಸುವಂತಿದೆ ಎಂಬುದು ಬುಧವಾರ ಬಿಡುಗಡೆಯಾಗಿರುವ ಸೂಚ್ಯಂಕಗಳಿಂದ ತಿಳಿದು ಬಂದಿದೆ.

ಅದರಲ್ಲೂ, ಕೋವಿಡ್‌–19 ಪಿಡುಗಿನ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳನ್ನು ಕಳೆದ ಡಿಸೆಂಬರ್‌ನಲ್ಲಿ ತೆರವು ಮಾಡಿದ ನಂತರ, ಉತ್ಪಾದನಾ ಕ್ಷೇತ್ರಕ್ಕೆ ಹೊಸ ವೇಗ ಸಿಕ್ಕಿದೆ ಎಂದು ಇವೇ ಸೂಚ್ಯಂಕಗಳು ಹೇಳುತ್ತವೆ.

ಚೀನಾದ ತಯಾರಿಕಾ ಕ್ಷೇತ್ರದಲ್ಲಿ ಕಂಡುಬಂದ ಈ ಬೆಳವಣಿಗೆಯು ಜಾಗತಿಕ ಮಾರುಕಟ್ಟೆಗಳಲ್ಲೂ ಉತ್ಸಾಹ ತಂದಿದೆ. ಏಷ್ಯಾ ರಾಷ್ಟ್ರಗಳ ಷೇರುಗಳು ಹಾಗೂ ಆಸ್ಟ್ರೇಲಿಯಾ ಡಾಲರ್‌ ನಷ್ಟದಿಂದ ಚೇತರಿಸಿಕೊಂಡಿವೆ. ತೈಲ ಕಂಪನಿಗಳ ಷೇರು ಮೌಲ್ಯವೂ ಜಿಗಿದಿದೆ. ಈ ಎಲ್ಲ ಅಂಶಗಳು, ಚೀನಾ ಆರ್ಥಿಕತೆ ಬಗ್ಗೆ ಹೂಡಿಕೆದಾರರಲ್ಲಿ ವಿಶ್ವಾಸ ವೃದ್ಧಿಸುವಂತೆ ಮಾಡಿವೆ.

‘ಮುಂದಿನ ಕೆಲ ತಿಂಗಳಲ್ಲಿ ಆರ್ಥಿಕತೆ ಪುಟಿದೇಳಬಹುದು ಎಂದು ಅಂದಾಜಿಸಿದ್ದೆವು. ಆದರೆ, ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಿದರೆ, ಈ ವರ್ಷದ ಆರ್ಥಿಕ ಪ್ರಗತಿ ದರ ಶೇ 5.5ರ ಗಡಿಯನ್ನು ದಾಟಬಹುದು’ ಎಂದು ‘ಕ್ಯಾಪಿಟಲ್‌ ಎಕನಾಮಿಕ್ಟ್‌’ ಸಂಸ್ಥೆಯಲ್ಲಿ ಚೀನಾ ಆರ್ಥಿಕ ವ್ಯವಹಾರಗಳ ವಿಭಾಗದ ಮುಖ್ಯಸ್ಥರಾದ ಜೂಲಿಯನ್ ಇವಾನ್ಸ್‌–ಪ್ರಿಚರ್ಡ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT