ಶನಿವಾರ, ನವೆಂಬರ್ 28, 2020
25 °C

ಚೀನಾ ಲಸಿಕೆ ಸುರಕ್ಷತೆ ಬಗ್ಗೆ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀಜಿಂಗ್‌: ಚೀನಾದ ಕೊರೊನಾ ವೈರಸ್ ಲಸಿಕೆಯ ಕ್ಲಿನಿಕಲ್‌ ಪ್ರಯೋಗಗಳು ಮುಂದುವರೆದಿದ್ದು ಲಸಿಕೆಯ ಸುರಕ್ಷತೆ ಕುರಿತಂತೆ ಪಾಶ್ಚಿಮಾತ್ಯ ರಾಷ್ಟ್ರಗಳು ಅನುಮಾನ ವ್ಯಕ್ತಪಡಿಸಿವೆ.

ಈಗಾಗಲೇ ಚೀನಾದಲ್ಲಿ ಕೆಲ ಲಸಿಕೆಗಳನ್ನು ತುರ್ತು ಬಳಕೆಗೆ ವಿತರಣೆ ಮಾಡಲಾಗಿದೆ. ಆದರೆ ಲಸಿಕೆಯ ಪರಿಣಾಮಗಳ ಬಗ್ಗೆ ಚೀನಾ ಮಾಹಿತಿ ನೀಡದಿರವುದು ಅನುಮಾನಕ್ಕೆ ಕಾರಣವಾಗಿದೆ  ಎಂದು ಅಮೆರಿಕ ಸೇರಿದಂತೆ ಹಲವು ಪಾಶ್ಚಿಮಾತ್ಯ ರಾಷ್ಟ್ರಗಳು ತಿಳಿಸಿವೆ.

ಈಗಾಗಲೇ ಬ್ರಿಟನ್‌ ದೇಶದ ಆಸ್ತ್ರಜೆನೆಕಾ ಹಾಗೂ ಅಮೆರಿಕದ  ಜಾನ್ಸನ್ & ಜಾನ್ಸನ್ ಕಂಪನಿಯ ಲಸಿಕೆಗಳು ಪ್ರಯೋಗದಲ್ಲಿ ಸಮಸ್ಯೆ ಉಂಟಾಗಿ ತಾತ್ಕಾಲಿಕವಾಗಿ ಪ್ರಯೋಗವನ್ನು ನಿಲ್ಲಿಸಲಾಗಿತ್ತು. ಆದರೆ ಚೀನಾ ಲಸಿಕೆಗಳಲ್ಲಿ ಸಮಸ್ಯೆ ಉಂಟಾಗಿರುವ ಬಗ್ಗೆ ಇದುವರೆಗೂ ವರದಿಯಾಗದಿರುವುದು ಆತಂಕಕ್ಕೆ ಕಾರಣವಾಗಿದೆ.

ಜಾಗತಿಕವಾಗಿ ಚೀನಾದ ಕೊರೊನಾ ವೈರಸ್ ಲಸಿಕೆಗಳ ಸುರಕ್ಷತೆಯ ಬಗ್ಗೆ ಆತಂಕ ವ್ಯಕ್ತವಾಗಿದೆ. ಈ ನಡುವೆ , ಜಗತ್ತಿನಾದ್ಯಂತ ಸಂಶೋಧಕರು ಅಭೂತಪೂರ್ವ ವೇಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಲಕ್ಷಾಂತರ ಜನರನ್ನು ಬಲಿ ಪಡೆದಿರುವ ಕೋವಿಡ್‌–19 ಅನ್ನು ಕೊನೆಗಾಣಿಸುವ ತುರ್ತು ಅಗತ್ಯವಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು