ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಷಿ ಜಿನ್‌ಪಿಂಗ್‌ ರಷ್ಯಾ ಪ್ರವಾಸ ಆರಂಭ

Last Updated 20 ಮಾರ್ಚ್ 2023, 16:05 IST
ಅಕ್ಷರ ಗಾತ್ರ

ಮಾಸ್ಕೊ: ಮೂರು ದಿವಸಗಳ ರಷ್ಯಾ ಪ್ರವಾಸ ಕೈಗೊಂಡಿರುವ ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್‌ ಅವರು ಸೋಮವಾರ ಮಾಸ್ಕೊಗೆ ಬಂದಿಳಿದರು. ಉಕ್ರೇನ್ ಮೇಲೆ ರಷ್ಯಾ ಯುದ್ಧ ನಡೆಸುತ್ತಿರುವ ವೇಳೆಯೇ ಷಿ ಈ ಪ್ರವಾಸ ಕೈಗೊಂಡಿದ್ದಾರೆ.

ಚೀನಾ ಮತ್ತು ರಷ್ಯಾದ ‘ಮಿತಿ ಇಲ್ಲಿದ ಸ್ನೇಹ’ವನ್ನು ಮತ್ತಷ್ಟು ಬಲಗೊಳಿಸುವ ನಿಟ್ಟಿನಲ್ಲಿ ಈ ಪ್ರವಾಸವು ಮತ್ತೊಂದು ಪ್ರಯತ್ನ ಎಂದು ಷಿ ಅವರ ಪ್ರವಾಸವನ್ನು ಉಭಯ ದೇಶಗಳು ಕರೆದಿವೆ.

ಈ ಭೇಟಿ ಕುರಿತು ರಷ್ಯಾ ಆಡಳಿತದ ವಕ್ತಾರ ಡಿಮಿಟ್ರಿ ಪೆಸ್ಕೋವ್‌ ಮಾಹಿತಿ ನೀಡಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್ ಮತ್ತು ಷಿ ಅವರು ಉಕ್ರೇನ್‌ ಬಿಕ್ಕಟ್ಟಿನ ಕುರಿತು ಚರ್ಚೆ ನಡೆಸಲಿದ್ದಾರೆ. ಇದಲ್ಲದೇ ಉಭಯ ದೇಶಗಳ ಅಧಿಕಾರಿಗಳು ಮಂಗಳವಾರ ಹಲವಾರು ಪ್ರಮುಖ ವಿಷಯಗಳನ್ನು ಚರ್ಚಿಸಲಿದ್ದಾರೆ ಎಂದರು.

ಬಹುತೇಕ ಪಾಶ್ಚಿಮಾತ್ಯ ದೇಶಗಳು ಉಕ್ರೇನನ್ನು ಬೆಂಬಲಿಸುತ್ತಿರುವ ವೇಳೆ ಚೀನಾ ಅಧ್ಯಕ್ಷರು ರಷ್ಯಾಕ್ಕೆ ಭೇಟಿ ನೀಡಿರುವುದು ರಷ್ಯಾ ಪಾಲಿಗೆ ಪ್ರತಿಷ್ಠೆಯ ಭೇಟಿಯಾಗಿದೆ.

ಇಂಧನ ತೈಲ ಮತ್ತು ಅನಿಲಕ್ಕಾಗಿ ಚೀನಾ ಬಹುವಾಗಿ ರಷ್ಯಾವನ್ನೇ ಅವಲಂಭಿಸಿದೆ. ಜೊತೆಗೆ, ಉಭಯ ದೇಶಗಳ ಪ್ರಮುಖ ಎದುರಾಳಿ ಅಮೆರಿಕ ಎಂಬುದೂ ಇಲ್ಲಿ ಗಮನಾರ್ಹ.

ಉಕ್ರೇನ್‌ನಿಂದ ಸಾವಿರಾರು ಮಕ್ಕಳನ್ನು ಅಪಹರಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಪುಟಿನ್‌ರನ್ನು ವಿಚಾರಣೆಗೆ ಒಳಪಡಿಸಬೇಕು ಎಂದು ಹೇಗ್‌ನಲ್ಲಿಯ ಅಂತರರಾಷ್ಟ್ರೀಯ ಕ್ರಿಮಿನಲ್‌ ನ್ಯಾಯಾಲಯ ಹೇಳಿದ ಕೆಲ ದಿನಗಳಲ್ಲೇ ಷಿ ರಷ್ಯಾಕ್ಕೆ ತೆರಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT